Header Ads
Header Ads
Breaking News

ಯುವತಿಗೆ ಕಿರುಕುಳ ಆತ್ಮಹತ್ಯೆಗೆ ಪ್ರಚೋದಿಸಿದ ಪ್ರಕರಣ, ಕುಂದಾಪುರ ಜನವಾದಿ ಮಹಿಳಾ ಸಂಘಟನೆಯಿಂದ ಪ್ರತಿಭಟನೆ


ಕುಂದಾಪುರದ ಶೇಡಿಮನೆಯ ಯುವತಿಯೋರ್ವಳ ಮೇಲೆ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರದಲ್ಲಿ ಜನವಾದಿ ಮಹಿಳಾ ಸಂಘಟನೆಯಿಂದ ತಾಲೂಕು ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಯಿತು.
ಬೀಡಿ ಕಟ್ಟುವ ಸ್ಥಿತಿಯಲ್ಲಿ ಈ ಯುವತಿಯ ಮನೆಯವರು ಬದುಕುತ್ತಿದ್ದು, ಈ ಪುಂಡ ಪೋಕರಿಗಳ ಹುಡುಗಾಟಕ್ಕೆ ಈಕೆ ಬಲಿಯಾಗಿದ್ದಾಳೆ, ಇಂದು ಹೆಣ್ಣು ಮಕ್ಕಳು ಒಬ್ಬೊಬ್ಬರಾಗಿ ಹೊರಗೆ ಹೋಗದಂತಹ ಭಯದ ವಾತಾರವರಣ ಸೃಷ್ಟಿಯಾಗಿದೆ. ಕೆಲಸಕ್ಕೆಂದು ತೆರಳಿದ ಅಮಾಸೆಬಲಿನ ಯುವತಿಯ ಮೇಲೆ ದೌರ್ಜನ್ಯ ನಡೆಸಿ ಆಕೆಯನ್ನು ಆತ್ಮಹತ್ಯೆಗೆ ಪ್ರಚೋದಿಸಿದ ಈ ಮೂವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಆತ್ಮಹತ್ಯೆಗೆ ಯತ್ನಿಸಿದ ಯುವತಿಯ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಆರೋಪಿಗಳ ಮನೆಯವರೇ ಕೂಡಲೇ ಕೊಡಬೇಕು ಇಲ್ಲವಾದಲ್ಲಿ ಮುಂದೆ ನಿರಂತರವಾಗಿ ಹೋರಾಟ ನಡೆಸಲಿದ್ದೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

Related posts

Leave a Reply