Header Ads
Breaking News

ಯುವತಿಗೆ ಯುವಕನೋರ್ವನಿಂದ ಚೂರಿ ಇರಿತ ಪ್ರಕರಣ : ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ವಿದ್ಯಾರ್ಥಿನಿಯೊಬ್ಬಳಿಗೆ ಯುವಕನೋರ್ವ ಬರ್ಬರವಾಗಿ ಚೂರಿಯಿಂದ ಇರಿದ ಘಟನೆ ನಡೆದಿದ್ದು ಯುವತಿಯ ಸ್ಥಿತಿ ಗಂಭೀರವಾಗಿದ್ದು, ಆರೋಪಿ ಯುವಕ ಸುಶಾಂತ್‌ನನ್ನು ಜೈಲ್ ವಾರ್ಡ್‌ಗೆ ವೈದ್ಯರು ಶಿಫ್ಟ್ ಮಾಡಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.ದೇರಳಕಟ್ಟೆಯ ಬಗಂಬಿಲ ಸಮೀಪ ಶುಕ್ರವಾರ ಸಂಜೆ ಘಟನೆ ನಡೆದಿದೆ. ಬೈಕ್ ನಲ್ಲಿ ಬಂದಿದ್ದ ಮಂಗಳೂರು ಶಕ್ತಿನಗರ ಮೂಲದ ಸುಶಾಂತ್ ಎಂಬ ಯುವಕ ಬಗಂಬಿಲ ನಿವಾಸಿ ವಿದ್ಯಾರ್ಥಿನಿ ದೀಕ್ಷಾ ಎಂಬುವಳಿಗೆ ಚೂರಿಯಿಂದ ಇರಿದು ತಾನೂ ಚೂರಿಯಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ರಕ್ತದ ಮಡುವಿನಲ್ಲಿ ನರಳುತ್ತಿದ್ದ ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸುಶಾಂತ್ ಹಾಗೂ ದೀಕ್ಷಾ ಪರಸ್ಪರ ಪ್ರೀತಿಸುತ್ತಿದ್ದು, ಕೆಲ ದಿನಗಳಿಂದ ಸುಶಾಂತ್ ನನ್ನು ನಿರಾಕರಿಸಿದ್ದ ಯುವತಿಯ ವಿರುದ್ಧ ಸುಶಾಂತ್ ಕೋಪಗೊಂಡಿದ್ದ. ಎರಡು ದಿನಗಳ ಹಿಂದೆಯೇ ದೀಕ್ಷಾ ಮೇಲೆ ದಾಳಿ ನಡೆಸಲು ಸುಶಾಂತ್ ಸ್ಕೆಚ್ ಹಾಕಿದ್ದ ಎನ್ನಲಾಗಿದೆ. ಸುಶಾಂತ್ 50 ಸಾವಿರ ರೂಪಾಯಿ ಖರ್ಚು ಮಾಡಿ ಈಚೆಗಷ್ಟೇ ಯುವತಿಯ ಹುಟ್ಟಿದ ಹಬ್ಬ ಆಚರಿಸಿದ್ದ. ಹುಟ್ಟುಹಬ್ಬದ ಮರು ದಿನವೇ ಯುವತಿ, ಸುಶಾಂತ್ ನಿಂದ ಮಾನಸಿಕ ಕಿರುಕುಳವಾಗುತ್ತಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.ಘಟನೆ ನಡೆದ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಆರಂಭಿಸಿದ್ದಾರೆ.

Related posts

Leave a Reply

Your email address will not be published. Required fields are marked *