Header Ads
Header Ads
Breaking News

ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ

ಮಂಗಳೂರಿನ ಖಾಸಗಿ ಸಂಸ್ತೆಯಲ್ಲಿ ಉದ್ಯೋಗಿಯಾಗಿರುವ ಯುವತಿ ರಾತ್ರಿ ತನ್ನ ಸಹೋದ್ಯೋಗಿಯೊಂದಿಗೆ ಕಾರ್‌ನಲ್ಲಿ ಸಾಗುತ್ತಿದ್ದಾಗ ಕಾರ್‌ನ್ನು ತಡೆದ ಐದು ಮಂದಿಯ ತಂಡ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದೆ. ಮಂಗಳೂರು ನಗರ ಹೊರವಲಯದ ಆದ್ಯಪಾಡಿಯಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಖುದ್ದು ಯುವತಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ದೌರ್ಜನ್ಯ ನಡೆಸಿರುವ ಯುವಕರು ಸಂಘಪರಿವಾರದ ಕಾರ್ಯಕರ್ತರು ಎಂದು ಆರೋಪಿಸಲಾಗಿದೆ. ಸಹದ್ಯೋಗಿಯೋರ್ವನ ಹುಟ್ಟುಹಬ್ಬ ಪಾರ್ಟಿಯಲ್ಲಿ ಮನೆಗೆ ಕಾರ್‌ನಲ್ಲಿ ಹಿಂದಿರುಗುತ್ತಿದ್ದಾಗ ಶುಕ್ರವಾರ ರಾತ್ರಿ ಸುಮಾರು 1 ಗಂಟೆ ಹೊತ್ತಿಗೆ ಯುವತಿ ಪ್ರಯಾಣಿಸುತ್ತಿದ್ದ ಕಾರನ್ನು ಐದು ಮಂದಿಯ ತಂಡವೊಂದು ಅದ್ಯಪಾಡಿಯ ಕ್ರಾಸ್ ರೋಡ್ ನಲ್ಲಿ ಅಡ್ಡಗಟ್ಟಿ ಯುವತಿಯ ಬಳಿಯಿಂದ ಎಟಿಎಂ ಕಾರ್ಡ್ ಕಿತ್ತುಕೊಂಡು ಲೈಂಗಿಕ ದೌರ್ಜನ್ಯ ನಡೆಸಿದೆ ಎಂದು ಆರೋಪಿಸಲಾಗಿದೆ.
ತನ್ನ ಮೇಲೆ ಶೇಖರ್, ಅಭಿಷೇಕ್, ನಿಖಿಲ್ ಹಾಗೂ ರಕ್ಷಿತ್ ಹಲ್ಲೆ ನಡೆಸಿದ್ದಾರೆ. ತನ್ನಲ್ಲಿದ್ದ ಚಿನ್ನದ ಸರ, ಎಟಿಎಮ್ ಕಾರ್ಡ್ ಕಿತ್ತು ಕಾರಿಗೆ ಕಲ್ಲು ತೂರಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಯುವತಿ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ.
ದುಷ್ಕರ್ಮಿಗಳು ತಮ್ಮ ಕಾರನ್ನು ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿ ದೌರ್ಜನ್ಯ ನಡೆಸಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಪಾರ್ಟಿ ಮುಗಿಸಿದ ಯುವತಿ ತನ್ನ ಸಹೋದ್ಯೋಗಿ ಯುವಕನೋರ್ವನ ಕಾರ್‌ನಲ್ಲಿ ಮನೆಯತ್ತ ತೆರಳುತ್ತಿದ್ದಳು.
ಘಟನೆಗೆ ಸಂಬಂಧಿಸಿದಂತೆ ರಕ್ಷಿತ್ ಎಂಬಾತ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾನೆ. , ಪಾರ್ಕ್ ಮಾಡಲಾಗಿದ್ದ ಕಾರಿನ ಬಗ್ಗೆ ವಿಚಾರಿಸಲು ಹೋಗಿದ್ದ ನಮ್ಮ ಮೇಲೆ ಹಲ್ಲೆ ನಡೆಸಲಾಗಿದೆ. ಯುವತಿ ಪೋನ್ ಕರೆ ಮಾಡಿ ಇತರರನ್ನು ಕರೆಸಿದ್ದಳು ಎಂದು ರಕ್ಷಿತ್ ದೂರಿನಲ್ಲಿ ತಿಳಿಸಿದ್ದಾನೆ.
ಎರಡೂ ದೂರುಗಳನ್ನು ದಾಖಲಿಸಿಕೊಂಡಿರುವ ಬಜ್ಪೆ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಪ್ರಕರಣದಲ್ಲಿ ಹಲವಾರು ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನು ಪೊಲೀಸರು ನಡೆಸಿದ್ದಾರೆ. ಪೊಲೀಸರ ತನಿಖೆಯ ಬಳಿಕವೇ ಈ ಪ್ರಕರಣದ ಸತ್ಯಾ ಸತ್ಯತೆ ಬೆಳಕಿಗೆ ಬರಲಿದೆ.

Related posts

Leave a Reply