Header Ads
Header Ads
Header Ads
Breaking News

ಯುವ ಕಸೋಗ ೨೦೧೭ ಸೆ.೨, ೩ರಂದು ರಾಜ್ಯಮಟ್ಟದ ಕಾರ್ಯಾಗರ ಮತ್ತು ಸಮ್ಮೇಳನ ಫಾದರ್ ಮುಲ್ಲರ್ ವೈದ್ಯಕೀಯ ಕ್ಯಾಂಪಸ್‌ನಲ್ಲಿ ಆಯೋಜನೆ

ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀ ರೋಗ ಶಾಸ್ತ್ರ ಸಂಘ, ಇದರ ಆಶ್ರಯದಲ್ಲಿ ಮಂಗಳೂರು ಪ್ರಸೂತಿ ಶಾಸ್ತ್ರ ಮತ್ತು ಸ್ತ್ರೀರೋಗ ಶಾಸ್ತ್ರ ಸಮಾಜದ ವತಿಯಿಂದ ಯುವ ಕಸೊಗ ೨೦೧೭ರ ರಾಜ್ಯಮಟ್ಟದ ಕಾರ್ಯಾಗಾರ ಹಾಗೂ ಸಮ್ಮೇಳನವನ್ನು ಸೆಪ್ಟಂಬರ್ ೨ ಮತ್ತು ೩ರಂದು ಫಾದರ್ ಮುಲ್ಲರ್ ವೈದ್ಯಕೀಯ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ.
ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೇಮ ಡಿಕುನ್ನಾ
ಈ ಸಮ್ಮೇಳನದ ಮುಖ್ಯ ವಿಷಯ ದೈನಂದಿನ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ಎಂಡೋಮೆಟ್ರಿಯೋಸಿಸ್‌ನಲ್ಲಿ ಉದರದರ್ಶಕದ ಉಪಯೋಗ, ಪ್ರಸೂತಿ ಶಾಸ್ತ್ರದಲ್ಲಿ ನಿರ್ಣಾಯಕ ಆರೈಕೆ ಹಾಗೂ ಸಂಶೋಧನಾ ವಿಧಾನಗಳು ಎಂಬ ವಿಷಯಗಳ ಬಗ್ಗೆ ಕಾರ್ಯಾಗಾರವನ್ನು ಸೆಪ್ಟಂಬರ್ ೨ರಂದು ಆಯೋಜಿಸಲಾಗಿದೆ. ಈ ಸಮ್ಮೇಳನಕ್ಕೆ ಮುಖ್ಯ ಅತಿಥಿಯಾಗಿ ಕರ್ನಾಟಕ ಬ್ಯಾಂಕ್ ಅಧ್ಯಕ್ಷರಾದ ಜಯರಾಮ್ ಭಟ್ ಆಗಮಿಸಲಿದ್ದು, ರಾಷ್ಟ್ರೀಯ, ಅಂತರರಾಷ್ಟ್ರೀಯ ಬೋಧಕ ವರ್ಗದವರು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿರುವರು ಎಂದು ಮಾಹಿತಿ ನೀಡಿದರು. ಈ ಸಂದರ್ಭ ಡಾ, ಅಮೃತ ಭಂಡಾರಿ,ಡಾ, ವತ್ಸಲ ಕಾಮತ್ ಉಪಸ್ಥಿತರಿದ್ದರು.
ವರದಿ: ಶರತ್ ಸಾಲ್ಯಾನ್ ಮಂಗಳೂರು

Related posts

Leave a Reply