Header Ads
Header Ads
Breaking News

ಯುವ ಕಾರ್ಯಕರ್ತರ ವಿರುದ್ದ ಸಿಡಿದೆದ್ದ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ

ಕುಂದಾಪುರ: ಬೈಂದೂರು ಕ್ಷೇತ್ರದಲ್ಲಿ ನನ್ನ ವಿರುದ್ದ ಯುವಜನತೆ ಮುನಿಸಿಕೊಂಡಿಲ್ಲ. ಹಿಂದೆ ವಿಧಾನಸಭೆಯಲ್ಲಿ ನನ್ನ ಪರ ಕೆಲಸ ಮಾಡಿದ ಬೆರಳೆಣಿಕೆಯಷ್ಟು ಮಂದಿ ಮಾತ್ರ ಮುನಿಸಿಕೊಂಡಿದ್ದಾರೆ. ನನ್ನಿಂದ ಲಾಭ ಸಿಗಲಿಲ್ಲವೆಂಬ ಒಂದೇ ಕಾರಣಕ್ಕೆ ಅವರೆಲ್ಲರೂ ಮುನಿಸಿಕೊಂಡಿದ್ದಾರೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿಎಂ ಸುಕುಮಾರ ಶೆಟ್ಟಿ ಅಸಮಾಧಾನ ಬಣದ ವಿರುದ್ದ ಸಿಡಿದೆದ್ದಿದ್ದಾರೆ.ಅವರು ಶನಿವಾರ ಶಿವಮೊಗ್ಗ ಲೋಕಸಭಾ ಚುನಾವಣೆ ಹಿನ್ನೆಲೆ ಬೈಂದೂರು ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಗಳಿಗೆ ಭೇಟಿ ನೀಡಿದ ಬಳಿಕ ಬೈಂದೂರಿನ ಬಿಜೂರಿನಲ್ಲಿ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.

ಯಾರು ನನ್ನ ವಿರೋಧಿಸುತ್ತಿದ್ದಾರೊ ಅವರಿಗೆ ನಾನು ಕಾಂಟ್ರಾಕ್ಟ್ ಕೊಡಿಸಿಲ್ಲವೆಂಬ ಕಾರಣಕ್ಕೆ ನನ್ನ ಮೇಲೆ ಮುನಿಸಿಕೊಂಡಿದ್ದಾರೆ. ಇವರೆಲ್ಲರೂ ಸಮಯ ಸಾಧಕರು. ಹಣಕ್ಕಾಗಿ ಬೇರೆ-ಬೇರೆ ಪಕ್ಷಗಳಿಗೆ ವಲಸೆ ಹೋಗುವವರು. ಇವರು ದೇಶಕ್ಕಾಗಿ, ಪಕ್ಷಕ್ಕಾಗಿ ದುಡಿಯುತ್ತಿಲ್ಲ. ಬದಲಾಗಿ ತಮ್ಮ ಏಳಿಗೆಗಾಗಿ, ಹಣಕ್ಕಾಗಿ ದುಡಿಯುತ್ತಿದ್ದಾರೆ. ಸೋಷೀಯಲ್ ಮೀಡಿಯಾಗಳಲ್ಲಿ ನನ್ನ ವಿರುದ್ದ ಬರಹ ಪ್ರಕಟಿಸಿದರೆ ಅದನ್ನೆಲ್ಲಾ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ತನ್ನನ್ನು ವಿರೋಧಿಸುತ್ತಿರುವ ಕೆಲ ಬಿಜೆಪಿ ಯುವ ಕಾರ್ಯಕರ್ತರ ವಿರುದ್ದ ಶಾಸಕ ಸುಕುಮಾರ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

Related posts

Leave a Reply