Header Ads
Breaking News

ಯುವ ತುಳು ಚಲನಚಿತ್ರ ನಿರ್ದೇಶಕ ಅಪಘಾತಕ್ಕೆ ಬಲಿ!

ಚಲನಚಿತ್ರದ ಯುವ ನಿರ್ದೇಶಕ ಹ್ಯಾರೀಸ್ ಹೌದಲ್ ನಿನ್ನೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದು ಕೋಸ್ಟಲ್‌ವುಡ್‌ಗೆ ತುಂಬಲಾರದ ನಷ್ಟ ಸಂಭವಿಸಿದೆ. ಶೂಟಿಂಗ್ ಮುಗಿಸಿ ವಾಪಾಸ್ ಹಿಂತಿರುಗುತ್ತಿದ್ದಾಗ ಮೂಡುಕೊಣಾಜೆಯಲ್ಲಿ ಮರಕ್ಕೆ ಕಾರು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.ಕಳೆದ 15 ದಿನಗಳಿಂದ ಮೂಡುಬಿದಿರೆ ಪರಿಸರದಲ್ಲಿ “ಆಟಿಡೊಂಜಿ ದಿನ ” ತುಳು ಚಲನಚಿತ್ರದ ಶೂಟಿಂಗ್ ನಡೆಯುತಿತ್ತು. ಅದರಂತೆ ಗುರುವಾರ ರಾತ್ರಿ ಶೂಟಿಂಗ್ ಮುಗಿಸಿ ತನ್ನ ಓಮ್ನಿ ಕಾರಿನಲ್ಲಿ ಶಿರ್ತಾಡಿಯಲ್ಲಿರುವ ನಿರ್ಮಾಪಕರನ್ನು ರೂಮಿಗೆ ಬಿಟ್ಟು ಹಿಂತಿರುಗುವ ಸಂದರ್ಭದಲ್ಲಿ ನಿದ್ದೆಯ ಮಂಪರಿನಲ್ಲಿದ್ದ ಹ್ಯಾರೀಸ್ ಅವರ ವಾಹನ ಮರಕ್ಕೆ ಡಿಕ್ಕಿ ಹೊಡೆದಿದ್ದು ಸ್ಟೇರಿಂಗ್ ಹ್ಯಾರೀಸ್ ಅವರ ಎದೆಗೆ ಗುದ್ದಿದ ಪರಿಣಾಮವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಬಡ ಕುಟುಂಬದಿಂದ ಬಂದಿದ್ದ ಹ್ಯಾರೀಸ್ ಅವರ ತಂದೆ ಬೀಡಿ ಕಾಂಟ್ರಾಕ್ಟರ್ ವ್ರತ್ತಿಯನ್ನು ಮಾಡಿಕೊಂಡಿದ್ದಾರೆ. ಐವರು ತಂಗಿಯರಿಗೆ ಓರ್ವ ಅಣ್ಣನಾಗಿದ್ದ ಹ್ಯಾರೀಸ್ ಅವರು ಚಿಕ್ಕಂದಿನಿಂದಲೇ ಚಲನಚಿತ್ರಗಳ ಬಗ್ಗೆ ಆಸಕ್ತಿಯನ್ನು ಹೊಂದಿದ್ದರಲ್ಲದೆ ಕೆಲವು ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ

Related posts

Leave a Reply

Your email address will not be published. Required fields are marked *