Header Ads
Breaking News

ಯುವ ಬ್ರಿಗೇಡ್ ತಂಡದಿಂದ ಕುಕ್ಕೆಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ಸ್ವಚ್ಚತಾ ಕಾರ್ಯ

ಕುಮಾರ ಸಂಸ್ಕಾರ ಜೊತೆಗೆ ಕುಕ್ಕೇ ಸುಬ್ರಹ್ಮಣ್ಯ ಪರಿಸರ ಸ್ವಚ್ಛತಾ ಕಾರ್ಯದಲ್ಲಿ ಯುವ ಬ್ರಿಗೇಡ್ ತಂಡವು ಎರಡು ದಿನಗಳಿಂದ ತೊಡಗಿಸಿಕೊಂಡಿದ್ದು, ಕುಮಾರಧಾರಾ ದರ್ಪಣ ತೀರ್ಥ ನದಿಯಿಂದ 5 ರಿಂದ 6 ಟನ್‍ಗಳಷ್ಟು ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ. ಬೆಳಗ್ಗೆ ಆರಂಭವಾದ ಸ್ವಚ್ಚತಾ ಕಾರ್ಯಕ್ಕೆ  ಚಕ್ರವರ್ತಿ ಸೂಲಿಬೆಲೆಯವರ ಸಾರಥ್ಯದಲ್ಲಿ ನೇತೃತ್ವದಲ್ಲಿ ರಾಜ್ಯ ಯುವ ಬ್ರಿಗೇಡ್ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡರು. ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸುಬ್ರಹ್ಮಣ್ಯ ಮಠ ಮತ್ತು ಗ್ರಾಮ ಪಂಚಾಯತ್ ಹಾಗು ಸಂಘ ಸಂಸ್ಥೆಗಳ, ಸಹಕಾರವು ಈ ಕಾರ್ಯಕ್ರಮಕ್ಕೆ ಲಭ್ಯವಿತ್ತು. ಈ ಸಂದರ್ಭದಲ್ಲಿ ಸಿಕ್ಕ ಕಸದ ರಾಶಿ ಹಾಗೂ ಮದ್ಯದ ಬಾಟಲಿಗಳು ನೋಡುಗರನ್ನು ಅಚ್ಚರಿಯನ್ನಾಗಿಸಿದೆ. ಒಟ್ಟಿನಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರ ಈ ಸ್ವಚ್ಚತಾ ಕಾರ್ಯ ಪ್ರಶಂಸೆಗೆ ಪಾತ್ರವಾಯಿತು. ಇನ್ನಾದರೂ ಜನಸಾಮಾನ್ಯರು,ಪ್ರವಾಸಿಗರು ಎಚ್ಚೆತ್ತುಕೊಂಡು ಇಡೀ ಕುಕ್ಕೇ ಸುಬ್ರಹ್ಮಣ್ಯ ವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಶ್ರಮಿಸುವಂತಾಗಬೇಕು.

Related posts

Leave a Reply

Your email address will not be published. Required fields are marked *