Header Ads
Header Ads
Header Ads
Breaking News

ಯುವ ಶಕ್ತಿಗಳಿಂದ ಋಣಾತ್ಮಕ ಅಂಶಗಳತ್ತ ಆಕರ್ಷಣೆ ಬ್ಲೂವೆಲ್ ಗೇಮ್ ಕಡೆ ಆಕರ್ಷಿತರಾಗಿ ಸಾವಿನ ಬಾಗಿಲು ಮುಟ್ಟುತ್ತಿರುವುದು ಖೇದಕರ ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಪ್ರೋಫೆಸರ್ ಶ್ರೀನಾಥ್ ರಾವ್ ಹೇಳಿಕೆ

 

ಇಂದಿನ ಯುವ ಶಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ಋಣಾತ್ಮಕ ಅಂಶಗಳತ್ತ ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಬ್ಲೂವೆಲ್ ಗೇಮ್‌ನಂತಹ ಮಾರಕ ಆಟಗಳ ಕಡೆ ಆಕರ್ಷಿತರಾಗಿ ಸಾವಿನ ಬಾಗಿಲು ಮುಟ್ಟುತ್ತಿರುವುದು ಖೇದಕರ ಎಂದು ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಪ್ರೋಫೆಸರ್ ಶ್ರೀನಾಥ್ ರಾವ್ ಕೆ. ಹೇಳಿದರು.
ಅವರು ಇಲ್ಲಿನ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಗುರುಕುಲ ಸೈನ್ಸ್ ಎಕ್ಸಪೋ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳಿಗೆ ಜ್ಞಾನ ಎನ್ನುವುದು ಲಭ್ಯವಾಗುವುದು ೫-೧೦ನೇ ತರಗತಿಯವರೆಗೆ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಎಷ್ಟು ಸಾಧ್ಯವೋ ಅಷ್ಟು ಜ್ಞಾನಾರ್ಜನೆ ಮಾಡಬೇಕು ಇದು ಶಾಶ್ವತವಾಗಿ ಉಳಿಯುತ್ತದೆ ಎಂದರು.
ಜ್ಞಾನ , ಕೌಶಲ್ಯ ಎರಡರಿಂದ ಹೊಸತನ ಬರುತ್ತದೆ, ಈ ಹೊಸತನದ ಸಂಕೇತವೇ ಪ್ರಗತಿ. ಅಲ್ಲದೇ ಗುಣಮಟ್ಟದ ಶಿಕ್ಷಣ ದೇಶವನ್ನು ಬದಲಾಯಿಸಬಲ್ಲದು ಇಂತಹ ಸಂದರ್ಭದಲ್ಲಿ ಈ ಮಕ್ಕಳಿಗೆ ಸಂಶೋಧನೆಯ ವೇದಿಕೆ ಅತ್ಯವಶ್ಯಕ. ಇದರಿಂದ ಮಕ್ಕಳು ಸಂಕುಚಿತ ಮನೋಭಾವನೆಯನ್ನು ಬಿಟ್ಟು ಹೊರಬರಲು ಸಾಧ್ಯ. ಇಂತಹ ಕೆಲಸವನ್ನು ಗುರುಕುಲ ಪಬ್ಲಿಕ್ ಶಾಲೆ ನಿರ್ವಹಿಸಿದೆ. ಹಾಗೆಯೇ ಗುರುವಿಲ್ಲದೇ ಯಾವ ಕೆಲಸವು ಸಾಧ್ಯವಿಲ್ಲ ಈ ಗುರುಕುಲದಲ್ಲಿ ಗುರುವಿನ ಸಹಾಯದಿಂದ ವಿಜ್ಞಾನದ ಪ್ರದರ್ಶನವಾಗುತ್ತಿದೆ. ಎಂಬುವುದು ತುಂಬಾ ಸಂತೋಷವಾಗಿದೆ ಎಂದು ನುಡಿದರು.
ಅಧ್ಯಕ್ಷತೆಯನ್ನು ವಹಿಸಿದ ಜಂಟಿ ಕಾರ್ಯನಿರ್ವಹಕರಾದ ಸುಭಾಶ್ಚಂದ್ರ ಶೆಟ್ಟಿ.ಕೆ ವಹಿಸಿದ್ದರು. ಆಡಳಿತ ಮಂಡಳಿಯ ನಿರ್ದೇಶಕರಲ್ಲೊಬ್ಬರಾದ ಅನುಪಮಾ ಎಸ್ ಶೆಟ್ಟಿ, ಶಾಲೆಯ ಪ್ರಾಂಶುಪಾಲರಾದ ಸಾಯಿಜು.ಕೆ.ಆರ್ ಉಪಸ್ಥಿತರಿದ್ದರು.

Related posts

Leave a Reply