Header Ads
Header Ads
Breaking News

ಯುವ ಸಮ್ಮೀಲನ ಸಾಂಸ್ಕೃತಿಕ ಹಬ್ಬ : ಕರಾವಳಿ ಲೇಖಕಿಯರ-ವಾಚಕಿಯರ ಸಂಘದಿಂದ ಆಯೋಜನೆ

ವಿಟ್ಲ: ಕರಾವಳಿ ಲೇಖಕಿಯರ-ವಾಚಕಿಯರ ಸಂಘ, ವಿಟ್ಲ ಕಾಶೀಮಠ ಶ್ರೀ ಕಾಶೀ ಮಹಿಳಾ ಮಂಡಲ ಹಾಗೂ ಶ್ರೀ ಕಾಶೀ ಯುವಕ ಮಂಡಲ ವತಿಯಿಂದ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಯುವ ಸಮ್ಮೀಲನ ಸಾಂಸ್ಕೃತಿಕ ಹಬ್ಬ ವಿಟ್ಲದ ಕಾಶಿಮಠದಲ್ಲಿ ನಡೆಯಿತು.ತರಂಗ ವಾರಪತ್ರಿಕೆ ಮಾಜಿ ಸಂಪಾದಕಿ ಅನಿತಾ ಪಿಂಟೋ ಕಾರ್ಯಕ್ರಮ ಉದ್ಘಾಟಿಸಿ, ಮಾಧ್ಯಮ ಮತ್ತು ಮಹಿಳೆಯ ಪ್ರತಿಸ್ಪಂದನ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿ ಮಹಿಳೆಯರ ವಿವಿಧ ಸಮಾಜ ಸೇವೆಗಳ ಮೂಲಕ ದೇಶ ಸುಭದ್ರವಾಗಿದೆ. ಮಹಿಳೆಯರ ಮೇಲೆ ದೊಡ್ಡ ಮಟ್ಟದ ಜವಾಬ್ದಾರಿ ಇದೆ. ಮಹಿಳೆ ದುರ್ಬಲವಲ್ಲ. ಅನ್ಯಾಯವಾದಾಗ ಬೀದಿಗೆ ಇಳಿದು ಹೋರಾಟ ನಡೆಸುವ ಛಲ ಹೊಂದಿದ್ದಾರೆ ಎಂದು ಹೇಳಿದರು.

ಪುತ್ತೂರು ಕ್ಷೇತ್ರದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಹಳ್ಳಿಯ ಮಹಿಳೆಯರನ್ನು ಸೇರಿಸಿಕೊಂಡು ಇಂತಹ ಕಾರ್ಯಕ್ರಮ ಆಯೋಜಿಸಿವುದು ಶ್ಲಾಘನೀಯವಾಗಿದೆ. ಮಹಿಳೆಯರು ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಮಹಿಳೆಯರು ಬಲಿಷ್ಠ ಹೊಂದಲಿದ್ದಾರೆ ಎಂದರು.

ಕರಾವಳಿ ಲೇಖಕಿಯರ, ವಾಚಕಿಯರ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ ಅವರು ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಮುಖ್ಯಸ್ಥೆ ಸರಸ್ವತಿ ಕುಮಾರಿ ಪ್ರಬಂಧ ಮಂಡಿಸಿದರು. ಕರಾವಳಿ ಲೇಖಕಿಯರ, ಲೇಖಕೀಯರ ಹಾಗೂ ವಾಚಕಿಯರ ಸಂಘದ ಸದಸ್ಯರಿಂದ ನೃತ್ಯ, ಹಾಡು, ಹಾಗೂ ಸ್ಥಳೀಯ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾಶೀ ಯುವಕ ಮಂಡಲದ ಗೌರವಾಧ್ಯಕ್ಷ ಬಾಬು ಕೆ.ವಿ, ಕಾಶೀ ಮಹಿಳಾ ಮಂಡಲದ ಅಧ್ಯಕ್ಷೆ ಮೀರಾ ಭಟ್, ಶ್ರೀ ಕಾಶೀ ಯುವಕ ಮಂಡಲದ ಅಧ್ಯಕ್ಷ ಕೇಶವ ವಿ.ಕೆ, ಯುವಕ ಮಂಡಲದ ಜತೆ ಕಾರ್ಯದರ್ಶಿ ನವೀನ್ ಕುಮಾರ್, ಸಂಘದ ಜತೆ ಕಾರ್ಯದರ್ಶಿ ಅರುಣ ನಾಗರಾಜ್, ಪಿ.ಎಂ ರೋಹಿನಿ ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *