Header Ads
Header Ads
Breaking News

ಯೂಟ್ಯೂಬ್‌ನಲ್ಲಿ ರಾಜ್ಯ ಮುಕ್ತ ವಿವಿಯ ಉಪಾನ್ಯಾಸ ವಿಡಿಯೋ ಆಪ್ : ಉಡುಪಿಯಲ್ಲಿ ವಿವಿಯ ಕುಪಲತಿ ಡಾ.ವಿದ್ಯಾಶಂಕರ್ ಹೇಳಿಕೆ

 ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯವು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೂಟ್ಯೂಬ್‌ನಲ್ಲಿಯೂ ಎಲ್ಲಾ ವಿಭಾಗದ ಪಠ್ಯಗಳ ಉಪನ್ಯಾಸ ನೀಡುವ ವಿಡೀಯೋಗಳನ್ನು ಅಪ್ ಲೋಡ್ ಮಾಡಲಿದೆ ಎಂದು ವಿವಿಯ ಕುಲಪತಿ ಡಾ. ವಿದ್ಯಾಶಂಕರ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಅನುಕೂವಾಗುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ 175 ತಾಲೂಕು ಕೇಂದ್ರದಲ್ಲಿಯೂ ಲರ್ನರ್ ಸಪೋರ್ಟ್ ಸೆಂಟರ್‌ರನ್ನು ಸ್ಥಾಪಿಸಲಾಗುವುದು. ಪ್ರತೀ ಮನೆಮನೆಗೂ ವಿವಿ ತಲುಪುವಂತೆ ಯೋಜನೆ ರೂಪಿಸಲಾಗಿದೆ. ತಿಂಗಳಿಗೊಮ್ಮೆ ಪಾದೇಶಿಕ ಕೇಂದ್ರದಲ್ಲಿ ಪ್ರಾದೇಶಿಕ ನಿರ್ದೆಶಕರು ಮತ್ತು ಸಂಬಂಧಿತ ವಿದ್ಯಾರ್ಥಿಗಳ ಜೊತೆ ವಿಡಿಯೋ ಕಾನ್ಪರೆನ್ಸ್ ನಡೆಸಲು ಉದ್ದೇಶಿಸಲಾಗಿದೆ ಎಂದರು. ರಾಜ್ಯದಲ್ಲಿರುವ ಎಲ್ಲಾ ಪ್ರಾದೇಶಿಕ ಪ್ರತ್ಯೇಕ ಕೇಂದ್ರಗಳಲ್ಲಿ ಮಹಿಳಾ ಸಂಪರ್ಕ ಕೇಂದ್ರ ಮತ್ತು ಗ್ರಂಥಾಲಯ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಸರಕಾರಿ ಇಲಾಖೆಗಳ ಮುಖ್ಯಸ್ಥರ ಮೂಲಕ ಉನ್ನತ ಅಧ್ಯಯನಕ್ಕೆ ಸುತ್ತೋಲೆ ಹೊರಡಿಸುವ ಯೋಜನೆ ಕೈಗೊಳ್ಳಲಾಗಿದೆ ಎಂದರು.

Related posts

Leave a Reply

Your email address will not be published. Required fields are marked *