Header Ads
Breaking News

ಯೂನಿವರ್ಸಿಟಿ ಆಫ್ ಡಿಸ್ಟಿಂಕ್ಷನ್ ಲರ್ನಿಂಗ್ ಎಜ್ಯುಕೇಶನ್ : ಸಂಸದ್ ಕುಂಜತ್ತಬೈಲ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

ಥೈಲ್ಯಾಂಡ್‍ನ ಯುನಿವರ್ಸಿಟಿ ಆಫ್ ಡಿಸ್ಟಿಂಕ್ಷನ್ಸ್ ಲರ್ನಿಂಗ್ ಎಜ್ಯುಕೇಶನ್ ಆರ್ಜೇಂಟೈನಾ ಪ್ರಸಿದ್ಧಿಯ ಸೈಂಟ್ ಪಾವ್ಲ್’ಸ್ ಇಂಟರ್‍ನೇಶನಲ್ ಯುನಿವರ್ಸಿಟಿ (ಎಸ್‍ಪಿಐಯು) ಶೈಕ್ಷಣಿಕ ಸಂಸ್ಥೆಯು ವಾರ್ಷಿಕ ಅಂತರಾಷ್ಟ್ರೀಯ ಘಟಿಕೋತ್ಸವ ಸಮಾರಂಭ ನಡೆಯಿತು.

ಥೈಲ್ಯಾಂಡ್ ರಾಷ್ಟ್ರದ ಸಿಲೋಮ್‍ನ ಹೊಟೇಲ್ ಹಾಲೀಡೇ ಇನ್ ಸಿಲೊಮ್ ಇದರ ಕ್ರಿಸ್ಟಲ್ ಬಾಲ್‍ರೂಂನ ಸಭಾಗೃಹದಲ್ಲಿ ಮಾಜಿ ವಿದೇಶಗಳ ಭಾರತೀಯ ರಾಯಭಾರಿ ಡಾ. ವಿ.ಬಿ ಸೋನಿ ಅಧ್ಯಕ್ಷತೆಯಲ್ಲಿ ನೆರವೇರಿತು.

ಘಟಿಕೋತ್ಸವದಲ್ಲಿ ಪಿ.ಎನ್ ಅಕಾಡೆಮಿ ಥೈಲ್ಯಾಂಡ್ ಇದರ ಮುಖ್ಯಸ್ಥ ಪಾವ್ಲ್ ಪಿ.ಸ್ರಿನರೂಲಾ ಮುಖ್ಯ ಅತಿಥಿಯಾಗಿ ಮತ್ತು ಗೌರವ ಅತಿಥಿಯಾಗಳಾಗಿ ಥೈಲ್ಯಾಂಡ್‍ನ ಪ್ರತಿಷ್ಠಿತ ಶಿಕ್ಷಣತಜ್ಞೆ ಕೆ.ರೋನೆಲ್, ಪ್ರಾಂಶುಪಾಲ ಅಡೋಲ್ಫ್ ಪೆರಿ ಜರ್ಮನ್ ಮತ್ತು ಎಸ್‍ಪಿಐಯು ಇದರ ಭಾರತೀಯ ಪ್ರತಿನಿಧಿ ಡಾ| ಎಂ.ಬಿಸಾನ್ವಿ ಉಪಸ್ಥಿತರಿದ್ದು ಅತ್ಯಮೂಲ್ಯ ಸಮಾಜ ಸೇವೆ ಪರಿಗಣಿಸಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಸಮಾಜ ಸೇವಕಿ ಶ್ರೀಮತಿ ಸಂಸದ್ ಕುಂಜತ್ತಬೈಲ್ (ಮಂಗಳೂರು) ಇವರಿಗೆ ಗೌರವ ಡಾಕ್ಟರೇಟ್ ಸನದು ಪ್ರದಾನಿಸಿ ಅಭಿನಂದಿಸಿದರು.
ವರದಿ: ಆರೀಪ್ ಕಲ್ಕಟ್ಟ ಉಳ್ಳಾಲ

Related posts

Leave a Reply

Your email address will not be published. Required fields are marked *