Header Ads
Breaking News

ಯೆನೆಪೋಯ ಆಯುರ್ವೇದ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ

ನರಿಂಗಾನ: ಯೆನೆಪೋಯ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಕ್ರಿಯಾಶಾರೀರ ಹಾಗೂ ಶಲ್ಯತಂತ್ರ ವಿಭಾಗದ ವತಿಯಿಂದ ಇತ್ತೀಚಿಗೆ ಬೃಹತ್ ರಕ್ತದಾನ ಶಿಬಿರವನ್ನು ನಡೆಯಿತು. ಯೆನೆಪೋಯ ಬ್ಲಡ್ ಬ್ಯಾಂಕ್ ಮುಖ್ಯಾಧಿಕಾರಿ ಡಾ. ಶರೀಫ್ ಅವರು ರಕ್ತದಾನದ ಮಹತ್ವದ ಕುರಿತಾದ ಉಪನ್ಯಾಸ ನೀಡಿದರು. ಯೆನೆಪೋಯ ವಿಶ್ವವಿದ್ಯಾನಿಲಯದ ಸಹಕುಲಪತಿ ಡಾ. ಸಿ.ವಿ. ರಘುವೀರ್ ಅವರು ಮಾತಾನಾಡಿ ರಕ್ತದಾನವೇ ಶ್ರೇಷ್ಠದಾನ ಎಂಬುದಾಗಿ ಹೇಳಿದರು. ಯೆನೆಪೋಯ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಪ್ರಸನ್ನ ಐತಾಳ್, ಕ್ರಿಯಾ ಶಾರೀರ ವಿಭಾಗದ ಸಹಪ್ರಾಧ್ಯಾಪಕ ಡಾ. ಹರಿಕೃಷ್ಣ ಬಿ.ಎನ್, ಶಲ್ಯತಂತ್ರ ವಿಭಾಗದ ಸಹಪ್ರಾಧ್ಯಾಪಕ ಡಾ. ದುರ್ಗಾಪ್ರಸಾದ್ ಎ.ವಿ. ಕಾಲೇಜು ವಿದ್ಯಾರ್ಥಿನಿ ಕು. ಫಾತಿಮಾ ನೂಫ್ ಉಪಸ್ಥಿತರಿದ್ದರು. ಬಹಳಷ್ಟು ಸಂಖ್ಯೆಯಲ್ಲಿ ರಕ್ತದಾನಿಗಳು ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು.

Related posts

Leave a Reply

Your email address will not be published. Required fields are marked *