Header Ads
Header Ads
Breaking News

ಯೆಯ್ಯಾಡಿ ರಾಮಭಜನಾ ಮಂದಿರದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಪುನಃಸ್ಕಾರ ನೂರಾರು ಭಕ್ತರಿಂದ ವಿಶೇಷ ಪೂಜೆ, ಅನ್ನಸಂತರ್ಪಣೆ

 

ಮಂಗಳೂರಿನ ಯೆಯ್ಯಾಡಿಯಲ್ಲಿರುವ ರಾಮ ಭಜನಾ ಮಂದಿರದಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಪ್ರತೀ ವರುಷದಂತೆ ಈ ವರುಷವೂ ವರಮಹಾಲಕ್ಷ್ಮೀ ಹಬ್ಬವನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಲಾಯಿತು. ಇಂದು ಅಷ್ಟ ದೇವಿಯರನ್ನು ಪೂಜಿಸುವ ದಿನ ಹಾಗೆಯೇ ಮಂಗಳೂರಿನ ಯೆಯ್ಯಾಡಿಯಲ್ಲಿರುವ ಶ್ರೀ ರಾಮ ಭಜನಾ ಮಂದಿರದಲ್ಲಿ ವಿಜೃಂಭಣೆಯಿಂದ ವರಮಹಾಲಕ್ಷ್ಮೀ ಪೂಜೆ ನಡೆಯಿತು. ನೂರಾರು ಮಂದಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಮಾಜಿ ಮೇಯರ್ ಮಹಾಬಲ ಮಾರ್ಲ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಾದ ಸುರಕ್ಷ ಮತ್ತು ಶ್ರವಣ ಆವರನ್ನು ಸನ್ಮಾನಿಸಲಾಯಿತು.


ಇದೇ ವೇಳೆ ಶ್ರೀ ರಾಮ ಭಜನಾಮಂದಿರದ ಅಧ್ಯಕ್ಷರಾದ ಗಣೇಶ್ ಎ ಬಂಗೇರ, ಗೌರವಧ್ಯಕ್ಷರದ ಪದ್ಮನಾಭ ಕೊಡಿಯಾಲ್ ಬೈಲ್, ಕಾರ್ಯದರ್ಶಿ ತುಳಸಿ, ಖಜಾಂಜಿ ಜಯರಾಂ ಯೆಯ್ಯಾಡಿ, ಮಾತೃಸಂಘದ ಅಧ್ಯಕ್ಷರಾದ ಸುಚಿತ್ರ ಶಿವಾನಂದ್, ಗೌರವಾಧ್ಯಕ್ಷರಾದ ಸುನಂದ ಗುಜ್ಜೋಡಿ, ಅರ್ಚಕರಾದ ನಾಗರಾಜ್ ಭಟ್ ಮತ್ತಿತ್ತರರು ಉಪಸ್ಥಿತರಿದ್ದರು.
ಇದೇ ವೇಳೆ ಶ್ರೀ ರಾಮ ಭಜನಾಮಂದಿರದಲ್ಲಿ ಅನ್ನಸಂತರ್ಪಣೆ ನಡೆಯಿತು.
ವರದಿ: ನಾಗರಾಜ್ ಮಂಗಳೂರು

Related posts

Leave a Reply