Header Ads
Header Ads
Breaking News

ಯೇನೆಪೊಯ ವಿವಿಯಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಿಡ್ನಿ ದಿನಾಚರಣೆ ಕಾರ್ಯಕ್ರಮ ಅಂಗಾಗ ದಾನಕ್ಕೆ ಸಹಿ ಹಾಕಿದ ವೈ. ಅಬ್ದುಲ್ಲಾ ಕುಂಞಿ ದೇರಳಕಟ್ಟೆಯ ಯೇನೆಪೊಯ ವಿವಿಯಲ್ಲಿ ಆಯೋಜನೆ

ವ್ಯಕ್ತಿಯೊಬ್ಬ ಜೀವಿತ ಕಾಲದಲ್ಲಿ ಹಾಗೆಯೇ ಮರಣಾ ನಂತರವೂ ಇತರರಿಗೆ ಸಹಾಯ ಮಾಡುವ ಮೂಲಕ ನಮ್ಮ ಹೆಸರು ಶಾಶ್ವತವಾಗಿಸಲು ಬಹಳಷ್ಟು ಮಾರ್ಗಗಳಿದೆ. ಆ ನಿಟ್ಟಿನಲ್ಲಿ ಸತ್ತ ನಂತರ ಮಾಡುವ ಅಂಗಾಗ ದಾನ ಶ್ರೇಷ್ಠ ಕಾರ್ಯ ಎಂದು ದೇರಳಕಟ್ಟೆಯ ಯೇನೆಪೊಯ ವಿವಿ ಕುಲಾಧಿಪತಿ ವೈ. ಅಬ್ದುಲ್ಲಾ ಕುಂಞ ಅಭಿಪ್ರಾಯಪಟ್ಟರು.ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕಿಡ್ನಿ ದಿನಾಚರಣೆ ಪ್ರಯುಕ್ತ ದೇರಳಕಟ್ಟೆಯ ಯೇನೆಪೊಯ ಆಸ್ಪತ್ರೆಯ ಆಡಿಟೋರಿಯಂನಲ್ಲಿ ಸೋಮವಾರ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯೇನೆಪೊಯ ವಿವಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ಕೊಡಲಾಗಿದೆ. ಹಾಗೆಯೇ ಅಂಗಾಗ ದಾನ ಕಾರ್ಯಗಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ. ಕಳೆದ ವರ್ಷ ಐವತ್ತು ಮಂದಿ ಅಂಗಾಗ ದಾನಕ್ಕೆ ನೋಂದಣಿ ಮಾಡಿಸಿದ್ದಾರೆ ಎಂದು ನುಡಿದರು.
ಹೆಣ್ಣು ಮಕ್ಕಳನ್ನು ನಿಯಂತ್ರಿಸುವ ಹಕ್ಕು ಯಾರಿಗೂ ಇಲ್ಲ. ತಮ್ಮ ಪ್ರತಿಭೆಗೆ ಅವಕಾಶ ಸಿಕ್ಕಾಗ ಅದನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಕರ್ತವ್ಯ ನಿಷ್ಠೆ ಮೆರೆಯುತ್ತಾ ಕೊಟ್ಟ ಜವಬ್ದಾರಿಯ ಗೌರವ ಹೆಚ್ಚಿಸಿದ್ದಾರೆ ಎಂದು ಕರ್ನಾಟಕ ಕರಾವಳಿ ಪಡೆಯ ಟಿಎಂ ಕಮಾಂಡರ್ ಡಿಐಜಿ ಎಸ್. ಎಸ್. ದಸಿಲ್ಲ ಹೇಳಿದರು.
ಹಿಂದಿನ ಕಾಲದಲ್ಲಿ ಮಹಿಳೆಯನ್ನು ಕೇವಲವಾಗಿ ನೋಡುತ್ತಿದ್ದರೂ ಸ್ವಪ್ರತಿಭೆಯಿಂದ ಮೇಲೆ ಬಂದಿದ್ದಾರೆ. ಸಮಾಜದಲ್ಲಿ ಸಮಾನತೆ ಅತಿ ಮುಖ್ಯ. ಬೇಧ ಸಲ್ಲದು. ಅವರ ಬಗ್ಗೆ ಗೌರವ ಭಾವನೆ ಬೇಕು. ಅವರನ್ನು ಪ್ರತಿಹಂತದಲ್ಲಿ ಪ್ರೋತ್ಸಾಹಿಸಬೇಕು. ಒಟ್ಟಿನಲ್ಲಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದರು.

ಎಸಿಬಿ ಎಸ್‌ಪಿ ಶ್ರುತಿ ಮಾತನಾಡಿ ಮಹಿಳೆ ಬಾಲ್ಯದಿಂದಲೂ ಒಂದಿಲ್ಲೊಂದು ಜವಾಬ್ದಾರಿ ನಿರ್ವಹಿಸುತ್ತಾ ಕುಟುಂಬದ ಬಗ್ಗೆ ಹೆಚ್ಚಿನ ಆದ್ಯತೆ ಕೊಡುತ್ತಾಳೆ. ಹಾಗಾಗಿ ಮಹಿಳೆಯರ ಸಂತಸದ ಜೊತೆಗೆ ಪುರುಷರು ಆಕೆಯ ಕಷ್ಟದಲ್ಲೂ ಪಾಲು ಪಡೆಯಬೇಕು ಎಂದರು.ಅಂಗಾಂಗ ದಾನದಲ್ಲಿ ಅರಿವು, ಸವಲತ್ತು ಹಾಗೂ ಸರಕಾರದ ಪಾತ್ರ ಅತಿ ಮುಖ್ಯವಾಗಿದೆ ಎಂದು ಅರ್ಗನ್ ಡೋನೆಶನ್ ಇಂಡಿಯಫೌಂಡೇಶನ್‌ನ ಲಾಲ್ ಗೋಯಲ್ ಹೇಳಿದರು.ಯೇನೆಪೋಯ ವಿವಿ ಉಪ ಕುಲಪತಿ ಡಾ. ವಿಜಯ್ ಕುಮಾರ್, ಕುಲಸಚಿವ ಡಾ. ಶ್ರೀಕುಮಾರ್ ಮೆನನ್ ಹಾಗೂ ಓರ್ಗನ್ ಡೊನೇಶನ್ ಇಂಡಿಯಾ ಚೇರ್‌ಮೆನ್ ಲಾಲ್ ಗೋಯೆಲ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವೈ. ಅಬ್ದುಲ್ಲಾ ಕುಂಞಿ ಹಾಗೂ ಪಶ್ಚಿಮ ವಲಯ ಭ್ರಷ್ಟಾಚಾರ ನಿಗ್ರಹ ದಳದ ಎಸಿಬಿ ಎಸ್‌ಪಿ ಶ್ರುತಿ ಎನ್. ಎಸ್ ಅಂಗಾಗ ದಾನ ಮಾಡುವುದಾಗಿ ಘೋಷಿಸಿದರು.

Related posts

Leave a Reply