Header Ads
Header Ads
Breaking News

ಯೊಧರನ್ನು ಕಳೆದುಕೊಂಡ ದಿನ ನಮಗೆಲ್ಲಾ ಕರಾಳ ದಿನ : ನಟ ಪುನೀತ್ ರಾಜ್‌ಕುಮಾರ್ ಹೇಳಿಕೆ

 ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ಬೆಳಗ್ಗೆ ಉಡುಪಿಯ ಕಡೆಗೋಲು ಕೃಷ್ಣ, ಮುಖ್ಯಪ್ರಾಣನ ದರ್ಶನ ಕೈಗೊಂಡು ಪರ್ಯಾಯ ಶ್ರೀಗಳಿಂದ ಮಂತ್ರಾಕ್ಷತೆ ಪಡೆದರು. ಈ ಸಂದರ್ಬದಲ್ಲಿ ಮಾತನಾಡಿದ ಅವರು ಯೊಧರನ್ನು ಕಳೆದುಕೊಂಡ ದಿನ ನಮಗೆಲ್ಲಾ ಕತ್ತಲೆದಿನ.ನಮಗೋಸ್ಕರ ಗಡಿಭಾಗದಲ್ಲಿ ಯೋಧರು ಕಷ್ಟಪಡ್ತಾರೆ.ಯೋಧರ ಬಗ್ಗೆ ನಾನು ಏನು ಮಾತಾಡಿದ್ರೂ ಕಮ್ಮೀನೆ.ನಮ್ಮ ಮಂಡ್ಯದ ಹೆಮ್ಮೆಯ ಯೋಧನನ್ನು ಕಳೆದುಕೊಂಡಿದ್ದೇವೆ.ಒಂದು ಕಡೆ ದುಖವಾಗ್ತಿದೆ.ನಮಗೇನೂ ಮಾಡೋಕೆ ಆಗ್ತಿಲ್ಲ ಅನ್ನೋ ನೋವೂ ಆಗ್ತಿದೆ
ಸರ್ಕಾರ ಈ ಹೊತ್ತಲ್ಲಿ ಏನ್ಮಾಡ್ತಿದೆ ಅನ್ನೋದು ಮುಖ್ಯವಲ್ಲ.ನಾವು ಈ ದೇಶಕ್ಕೆ ಏನು ಮಾಡಿದೇವೆ ಅನ್ನೋದು ಮುಖ್ಯ.ಎಲ್ಲರೂ ಸೇರಿ ಈ ದೇಶಕ್ಕಾಗಿ ಏನಾದರೂ ಮಾಡೋಣ ಎಂದರು.ಅಪ್ಪಾಜಿ ಜೊತೆ ಹಲವುಬಾರಿ ಕೃಷ್ಣಮಠಕ್ಕೆ ಭೇಟಿ ನೀಡಿದ್ದೆ.ಆ ದಿನಗಳು ಯಾವತ್ತಿಗೂ ಮರೆಯಕಾಗಲ್ಲ.ತಂದೆ ಜೊತೆ ಕೃಷ್ಣಮಠಕ್ಕೆ ಬೇಟಿ ನೀಡಿದ ದಿನಗಳನ್ನು ನೆನೆದ ಪುನೀತ್ ,ನಟಸಾರ್ವಭೌಮ ಗೆಲ್ಲಿಸಿದ್ದಕ್ಕೆ ಕನ್ನಡ ಪ್ರೇಕ್ಷಕರಿಗೆ ಪವರ್ ಸ್ಟಾರ್ ಕೃತಜ್ಞತೆ ಸಲ್ಲಿಸಿದರು.

Related posts

Leave a Reply

Your email address will not be published. Required fields are marked *