Header Ads
Header Ads
Breaking News

ಯೋಗದಲ್ಲಿ ಗಿನ್ನೀಸ್ ದಾಖಲೆ ಮಾಡಿದ್ದ ತನುಶ್ರೀಗೆ ಪ್ರಮಾಣ ಪತ್ರ ವಿತರಣೆ

ಕಳೆದ ಮಾರ್ಚ್‍ನಲ್ಲಿ ಯೋಗದಲ್ಲಿ ಗಿನ್ನೀಸ್ ದಾಖಲೆ ಮಾಡಿದ್ದ ತನುಶ್ರೀ ಪಿತೋಶಿ ಅವರಿಗೆ ಗಿನ್ನೀಸ್ ದಾಖಲೆಯ ಪ್ರಮಾಣ ಪತ್ರ ಮತ್ತು ಪದಕವನ್ನು ಪ್ರಧಾನ ಮಾಡುವ ಸಮಾರಂಭ ಸೈಂಟ್ ಸಿಸಲೀಸ್ ಶಾಲಾ ಸಭಾಂಗಣದಲ್ಲಿ ನಡೆಯಿತು. ಕಳೆದ ಮಾರ್ಚ್‍ನಲ್ಲಿ ಒಂದು ನಿಮಿಮಿಷಕ್ಕೆ 44 ಬಾರಿ ತನ್ನ ದೇಹದ ಎದೆಯ ಭಾಗ ಮತ್ತು ತಲೆಯನ್ನು ಸ್ಥಿರವಾಗಿ ಇರಿಸಿ ಉಳಿದ ಭಾಗವನ್ನು ತಿರುಗಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದ ಯೋಗಪಟು ತನುಶ್ರೀ ಪಿತ್ರೋಡಿ ಅವರಿಗೆ ಗಿನ್ನೆಸ್ ದಾಖಲೆಯ ಪ್ರಮಾಣ ಪತ್ರ ಹಾಗೂ ಪದಕವನ್ನು ಪ್ರಧಾನ ಮಾಡಲಾಯಿತು. ಈ ಹಿಂದೆ ಅಮ್ಮಣ್ಣಿರಾಮಣ್ಣ ಸಭಾಂಗಣದಲ್ಲಿ ಒಂದು ನಿಮಿಷದಲ್ಲಿ 42 ಬಾರಿ ಯೋಗ ಭಂಗಿಯ ಮೂಲಕ ಗಿನ್ನೆಸ್ ದಾಖಲೆ ಮಾಡಿದ್ದರು. ಅದೇ ದಾಖಲೆಯನ್ನ ಮತ್ತೆ ಸೈಂಟ್ ಸಿಸಲೀಸ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಂದು ನಿಮಿಷಯದಲ್ಲಿ 44 ಬಾರಿ ಯೋಗ ದಾಖಲೆ ಮಾಡಿ ತನ್ನದೇ ದಾಖಲೆ ಮುರಿದಿದ್ದರು. ಕಾರ್ಯಕ್ರಮದಲ್ಲಿ ತನುಶ್ರೀ ಸಾಧನೆಗಳ ಭಿತ್ತಿ ಚಿತ್ರ ಪ್ರದರ್ಶನ, ತನುಶ್ರೀ ಪ್ರತಿಭಾ ಪ್ರದರ್ಶನ, ತನುಮನ ಯೋಗ ಸಾಕ್ಷ್ಯಾ ಚಿತ್ರ ಪ್ರದರ್ಶನ ಮತ್ತು ನನ್ನ ಕನಸು ಏಕವ್ಯಕ್ತಿ ಪ್ರದರ್ಶನ ನಡೆದಿದ್ದು ನೆರೆದವರ ಗಮನಸೆಳೆಯಿತು.

Related posts

Leave a Reply

Your email address will not be published. Required fields are marked *