Header Ads
Header Ads
Header Ads
Breaking News

ಯೋಗಾ ಬಾಬಾ ರಾಮ್ ದೇವ್ ನೇತೃತ್ವದಲ್ಲಿ ಯೋಗ ಶಿಬಿರ : ಐದು ದಿನಗಳ ಕಾಲ ನಡೆದ ಯೋಗ ಶಿಬಿರ ಸಂಪನ್ನ

ಪತಂಜಲಿಯ ಯೋಗ ಗುರು ಬಾಬಾ ರಾಮ್ ದೇವ್ ಉಡುಪಿ  ಕೃಷ್ಣ  ಮಠದ ಪಾಕಿಂಗ್ ಪ್ರದೇಶದಲ್ಲಿ ಹಮ್ಮಿಕೊಂಡ ಐದು ದಿನಗಳ ಯೋಗ ಶಿಬಿರ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಯೋಗ ಶಿಬಿರವನ್ನು ಆಯುರ್ವೇದ ವೈದ್ಯ ಸಂಘದ ರಾಜ್ಯಾಧ್ಯಕ್ಷ ಅಶೋಕ್ ಉದ್ಘಾಟಿಸಿದರು. ಈ ಸಂದರ್ಬದಲ್ಲಿ ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಗಳು ಉಡುಪಿಯಲ್ಲಿ ನಡೆದ ಯೋಗ ಶಿಬಿರ ಯಶಸ್ವಿಯಾಗಿದೆ. ಬಾಬಾ ರಾಮ್ ದೇವ್ ಅವರ ಮಾರ್ಗದರ್ಶನದಲ್ಲಿ ನಡೆದ ಶಿಬಿರದ ಮೂಲಕ ಅನೇಕ ಯೋಗ ಪ್ರೀಯರು ಲಾಭವನ್ನು ಪಡೆದುಕೊಂಡಿದ್ದಾರೆ. ಇವರ ಮೂಲಕ ಹಳ್ಳಿ ಹಳ್ಳಿಗಳಿಗೂ ಯೋಗ ಪಸರಿಸಲಿ ಎಂದು ಹಾರೈಸಿದರು. ಬಾಬಾ ರಾಮದೇವ್ ಅವರು ಯೋಗಾಸನ, ಪ್ರಾಣಾಯಾಮದ ಅನೇಕ ಮಜಲುಗಳನ್ನು ತಿಳಿಸಿಕೊಟ್ಟರು. ಸಾವಿರಾರು ಯೋಗ ಪ್ರೀಯರು ಯೋಗಾಸನ, ಪ್ರಾಣಾಯಾಮಗಳನ್ನು ಮಾಡಿದರು. ಸುಮಾರು ಎರಡುವರೆ ಗಂಟೆಗಳ ಕಾಲ ಬಾಬಾ ನೇತೃತ್ವದಲ್ಲಿ ಯೋಗ ಶಿಬಿರ ನಡೆಯಿತು. ಇಂದಿನ ಶಿಬಿರದಲ್ಲಿ ಪರ್ಯಾಯ ಶ್ರೀಗಳಿಂದ ಬಾಬಾ ರಾಮ್ ದೇವ್ ಗೆ ಸನ್ಮಾನ ಮಾಡಲಾಯಿತು. ಕೃಷ್ಣ ಮಠದ ವತಿಯಿಂದ ರಾಮ್ ದೇವ್ ಗೆ ಅಬಿನವ ಪತಂಜಲಿ ಬಿರುದು ನೀಡಿ ಸನ್ಮಾನಿಸಲಾಯಿತು.

Related posts

Leave a Reply

Your email address will not be published. Required fields are marked *