Header Ads
Breaking News

ಯೋಗಿ ಆದಿತ್ಯನಾಥರ ಅವಹೇಳನ : ಜೋಗಿ ಸಮಾಜದಿಂದ ಖಂಡನೆ

ನಾಥ ಸಮುದಾಯದ ಪರಮೋಚ್ಛ ಗುರುಗಳಾದ ಪೂಜ್ಯ ಯೋಗಿ ಆದಿತ್ಯನಾಥರ ಬಗ್ಗೆ ಮಿಥುನ್ ರೈ ಸಾರ್ವಜನಿಕವಾಗಿ ತುಚ್ಛ ಶಬ್ದಗಳಿಂದ ಅವಹೇಳನ ಮಾಡುವುದು ಕರ್ನಾಟಕದ ನಾಥ ಸಂಪ್ರದಾಯಸ್ಥ ಸಮಸ್ತ ಯೋಗಿ ಸಮಾಜಕ್ಕೆ ಆಘಾತವನ್ನುಂಟು ಮಾಡಿದೆ. 

ಯೋಗಿ ಆದಿತ್ಯನಾಥರು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಮುಖಕ್ಕೆ ಮಸಿ ಬಳಿಯುವುದಾಗಿ ಹೇಳಿರುವ ಮಿಥುನ್‌ರೈಗೆ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ತಿಳಿದಿಲ್ಲ ಎಂಬುದು ಖಚಿತ. ಪರಶುರಾಮ ಹಿಂದಿನ ರುವಾರಿ ನಾಥ ಪಂಥದ ಪ್ರವರ್ತಕರಲ್ಲೊಬ್ಬರಾದ ಗುರು ಗೋರಕ್ಷನಾಥರ ಎಂದು ಚರಿತ್ರೆಯಲ್ಲಿ ದಾಖಲಾಗಿದೆ. ಹಾಗೇನೆ ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕದ್ರಿ ಮಂಜುನಾಥ ದೇವಸ್ಥಾನ ಮಂಜುನಾಥ ಸ್ವಾಮಿ. ಮೂರ್ತಿ ನಾಥ ಪಂಥದ ಪ್ರವರ್ತಕರು ಗೋರಕ್ಷನಾಥರ ಗುರುಗಳು ಆದ ಗುರು ಮತ್ತೆಂದ್ರನಾಥರ ತಪಸ್ಸಿನಿಂದ ಉದ್ಭವಿಸುವುದು ಎಂಬ ವಿಚಾರ ಚರಿತ್ರೆಯಲ್ಲಿ ಅಡಕವಾಗಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ ಯೋಗಿ ಆದಿತ್ಯನಾಥರ ಅವಿನಾಭಾವ ಸಂಬಂಧ ಹೊಂದಿರುತ್ತಾರೆ. ಸಮಸ್ತ ಜೋಗಿ ಸಮಾಜಕ್ಕೆ ಪರಮೋಚ್ಛ ಗುರುಗಳೂ, ಮಾರ್ಗದರ್ಶಕರು ಆದ ಯೋಗಿ ಆದಿತ್ಯನಾಥರ ಅವಹೇಳನವನ್ನ ಕರ್ನಾಟಕದಲ್ಲಿರುವ ಇಪ್ಪತ್ತು ಲಕ್ಷ ಜೋಗಿ ಸಮಾಜ ಮಿಥುನ್ ರೈಯವರು ಸಾರ್ವಜನಿಕವಾಗಿ ಯೋಗಿ ಆದಿತ್ಯನಾಥರ ಕ್ಷಮೆ ಯಾಚಿಸಬೇಕು ಎಂದು ಸಮಸ್ತ ಜೋಗಿ ಸಮಾಜ ಆಗ್ರಹಿಸುತ್ತದೆ. ಮಿಥುನ್ ರೈ ಅವರ ನಿಂದನೆ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘ (ರಿ) ಕದ್ರಿ ಪೊಲೀಸ್ ಠಾಣಾಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಿದರು.

Related posts

Leave a Reply

Your email address will not be published. Required fields are marked *