Header Ads
Header Ads
Breaking News

ಯೋಗ ನಿದ್ರೆಯಲ್ಲಿರುವ ಕೃಷ್ಣನನ್ನು ಎಬ್ಬಿಸುವ ಅಪೂರ್ವ ದೃಶ್ಯ

ಚಾತುರ್ಮಾಸ್ಯದ ಕಾಲದಲ್ಲಿ ದೇವರು ಕೂಡಾ ಯೋಗ ನಿದ್ರೆಯಲ್ಲಿರ್ತಾರಂತೆ. ಈಗ ದೇವರ ನಿದ್ರೆಯ ಸಮಯ ಮುಗಿದಿದೆ. ಉಡುಪಿಯಲ್ಲಿ ಕಡಗೋಲು ಕೃಷ್ಣ ದೇವರನ್ನು ನಿದ್ದೆಯಿಂದೆಬ್ಬಿಸುವ ವೈಭೋಗವನ್ನೊಮ್ಮೆ ಕಾಣಲೇ ಬೇಕು. ಉಷ:ಕಾಲದಲ್ಲಿ ನಡೆಯುವ ಪಶ್ಚಿಮ ಜಾಗರ ಪೂಜೆ ನಿಜಕ್ಕೂ ಒಂದು ಅದ್ಬುತ ….

ಚಾತುರ್ಮಾಸ್ಯ ಅವಧಿಯಲ್ಲಿ ದೇವರು ಯೋಗನಿದ್ರೆಯಲ್ಲಿರ್ತಾನೆ ಅನ್ನೋದು ಪ್ರತೀತಿ. ಈ ವೇಳೆ ದೇವರ ರಥೋತ್ಸವ ನಡೆಯಲ್ಲ, ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯ ತನಕ ದೇವರನ್ನು ಯೋಗನಿದ್ರೆಯಿಂದ ಎಬ್ಬಿಸುವ ಸಂಭ್ರಮ ಇರುತ್ತೆ. ಉಷ:ಕಾಲದಲ್ಲಿ ಪರ್ಯಾಯ ಮಠಾಧೀಶರು ದೇವರನ್ನು ಹಲವು ಬಗೆಯಿಂದ ಪೂಜಿಸುತ್ತಾರೆ. ಈ ಸಾಂಪ್ರದಾಯಿಕ ಪೂಜಾ ವಿಧಾನಗಳನ್ನು ನೋಡೋದೇ ಕಣ್ಣಿಗೆ ಹಬ್ಬ. ಪ್ರತೀದಿನ ಮಠಾಧೀಶರು ಉಡುಪಿ ಕೃಷ್ಣನಿಗೆ 16 ಬಗೆಯ ಪೂಜೆ ಮಾಡುತ್ತಾರೆ. ಆದರೆ ಎಲ್ಲಾ ಪೂಜೆಗಳಿಗೂ ಕಳಶವಿಟ್ಟಂತೆ ಈ ಪಶ್ಚಿಮ ಜಾಗರ ಪೂಜೆ ನಡೆಯುತ್ತೆ. ಗರ್ಭ ಗುಡಿಯ ಸುತ್ತಲೂ ಸಾವಿರಾರು ದೀಪಗಳ ಅಲಂಕಾರ ಮಾಡಲಾಗುತ್ತೆ. ಬಗೆಬಗೆಯ ನಾದ ವೈಭವದಲ್ಲಿ ಉದಯರಾಗವನ್ನು ನುಡಿಸಲಾಗುತ್ತೆ.ಈ ವೇಳೆಯಲ್ಲಿ ನಡೆಯುವ ದೇವರ ಅಭಿಷೇಕ, ಆರತಿಯನ್ನು ನೋಡಿದ ಜನ ವಿಶಿಷ್ಟ ಅನುಭವ ಪಡೆಯುತ್ತಾರೆ. ಸೂರ್ಯ ಮೂಡುವ ಮುನ್ನವೇ ನಡೆಯುವ ಈ ಬ್ರಾಹ್ಮೀ ಪೂಜೆಯನ್ನು ಪಶ್ಚಿಮ ಜಾಗರ ಪೂಜೆ ಎನ್ನುತ್ತಾರೆ.

 ಮನುಷ್ಯನ ಆರಾಧನೆಯ ಕಲ್ಪನೆಗಳೇ ಅದ್ಬುತ, ತಮ್ಮಂತೆಯೇ ದೇವರು ಎಂದು ಭಾವಿಸುವ ಭಕ್ತರು ದೇವರಿಗೂ ನಿದ್ರೆ ಮಾಡಿಸಿ, ಮತ್ತೆ ಅವರನ್ನು ಸುಪ್ರಭಾತ ಪೂಜೆಗಳಿಂದ ಎಬ್ಬಿಸುವ ಪರಿಯೇ ಅನನ್ಯವಾದದ್ದು.ಈ ವೇಳೆ ಮಠದ ಆವರಣದಲ್ಲಿ ಅಪರೂಪದ ಸೂರ್ಯವಾದ್ಯವನ್ನು ಮೊಳಗಿಸಲಾಗುತ್ತೆ. ಕಡಗೋಲು ಕೃಷ್ಣನ ವಿಶ್ವರೂಪ ದರ್ಶನ ಕಾಣಲು ಅದ್ಬುತವಾಗಿರುತ್ತೆ. ಸಾವಿರಾರು ದೀಪಗಳನ್ನು ಬೆಳಗಿ ದೇವರ ಆರಾಧನೆ ನಡೆಯುತ್ತೆ.

ಸೂರ್ಯನ ಬೆಳಕು ಹರಿಯುವ ಮುನ್ನವೇ ಚಳಿಗಾಲದ ಈ ಹಿತವಾದ ವಾತಾವರಣದಲ್ಲಿ ಈ ಅನುಪಮ ಗಳಿಗೆಯನ್ನು ಅನುಭವಿದೋದೇ ಒಂದು ವಿಶಿಷ್ಟ ಅನುಭವ. ಅಶ್ವಿಜ ಮಾಸದಿಂದ ಕಾರ್ತಿಕ ಮಾಸದವರೆಗೆ ಈ ಅಪರೂಪದ ಪೂಜೆ ನೋಡಬಹುದು.

Related posts

Leave a Reply

Your email address will not be published. Required fields are marked *