Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಯೋಜನಾ ಪ್ರಾಧಿಕಾರದ ಬಗ್ಗೆ ತಪ್ಪು ಮಾಹಿತಿಯಿಂದ ಜನತೆ ಗೊಂದಲ ಯೋಜನಾ ಪ್ರಾಧಿಕಾರ ಅಸ್ಥಿತ್ವಕ್ಕೆ ಕಾಪು ನಗರವನ್ನು ನಗರವನ್ನಾಗಿಸಲು ಸಾಧ್ಯ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಸ್ಪಷ್ಟನೆ

ಕಾಪುವಿನಲ್ಲಿ ಅಸ್ಥಿತ್ವಕ್ಕೆ ಬಂದಿರುವ ಯೋಜನಾ ಪ್ರಾಧಿಕಾರದ ಬಗ್ಗೆ ಜನರಿಗೆಗೆ ಪೂರಕ ಮಾಹಿತಿಯ ಕೊರತೆಯಿಂದಾಗಿ, ಪ್ರಾಧಿಕಾರದ ಬಗ್ಗೆ ಬಹಳಷ್ಟು ಜನರಲ್ಲಿ ತಪ್ಪು ಅಭಿಪ್ರಾಯಗಳಿವೆ. ಈ ಯೋಜನಾ ಪ್ರಾಧಿಕಾರ ಅಸ್ಥಿತ್ವಕ್ಕೆ ಬಂದಿರುವ ಪರಿಣಾಮ ಕಾಪು ನಗರವನ್ನು ಯೋಜನಾ ಬದ್ಧವಾದ ನಗರವನ್ನಾಗಿಸಲು ಸಾಧ್ಯ ಎಂಬುದಾಗಿ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಸ್ಪಷ್ಟ ಪಡಿಸಿದ್ದಾರೆ.

ಕಾಪುವಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲವು ದಿನಗಳ ಹಿಂದೆ ಖಾಸಗಿ ಸಂಘಟನೆಯೊಂದು ಪ್ರಾಧಿಕಾರದ ವಿರುದ್ಧ ಪ್ರಾಧಿಕಾರ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದು, ಆ ಸಂಘಟನೆಯ ಪ್ರಮುಖರು, ಈ ಪ್ರಾಧಿಕಾರದ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿದವರು ಸಹಿತ ಕಾನೂನು ತಜ್ಞರನ್ನು ಒಟ್ಟು ಸೇರಿ ಚರ್ಚಾ ಸಭೆಯೊಂದನ್ನು ನಡೆಸಿ ಅವರಿಗೆ ಪೂರಕ ಮಾಹಿತಿ ಹಾಗೂ ಸಾಧಕ-ಭಾದಕಗಳ ಬಗ್ಗೆ ತಿಳಿಸಿದಾಗ ಸಭೆಯಲ್ಲಿ ಪ್ರಾಧಿಕಾರ ಅಸ್ಥಿತ್ವಕ್ಕೆ ಬೆಂಬಲ ವ್ಯಕ್ತವಾಗಿದೆ ಎಂದರು.

ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಮಾತನಾಡಿ, ಯೋಜನಾ ಪ್ರಾಧಿಕಾರದಲ್ಲಿ ಯಾವುದೇ ಕೆಲಸಗಳು ಆಗ ಬೇಕಾಗಿದ್ದರೆ ಮಧ್ಯವರ್ತಿಗಳ ಬಳಕೆ ಬೇಡ. ಕಾರಣ ಅವರು ತಮ್ಮ ಕಿಸಿ ತುಂಬಿಸಿಕೊಳ್ಳುವುದಕ್ಕಾಗಿ ಇಲ್ಲ ಸಲ್ಲದ ದಾಖಲೆಗಳ ಬಗ್ಗೆ ತಪ್ಪು ಮಾಹಿತಿ ನೀಡುವುದು ನಡೆಯುತ್ತೆ. ಯಾವುದೇ ಸಹಕಾರ ಬೇಕಾದಲ್ಲಿ ನಮ್ಮ ಸಿಬ್ಬಂದಿಗಳು ನಿಮ್ಮ ಸೇವೆಗೆ ಸದಾ ಸಿದ್ಧರಾಗಿದ್ದಾರೆ. ನೀವು ನೀಡುವ ಅರ್ಜಿಗಳು ಅಂತಿಮ ಹದಿನೈದು ದಿನಗಳಲ್ಲಿ ವೀಲೆವಾರಿ ಮಾಡುವ ನಿರ್ದೇಶನ ಸರಕಾರದ್ದಾಗಿದೆ ಎಂದರು. ಈ ಸಂದರ್ಭ ಲವ ಕರ್ಕೇರ, ಹರೀಶ್ ನಾಯಕ್, ಮನ್ಸೂರ್, ಪ್ರಾಧಿಕಾರದ ಅಧಿಕಾರಿ ಎಂ. ಮೋಹನ್ ಉಪಸ್ಥಿತರಿದ್ದರು.

Related posts

Leave a Reply