Header Ads
Header Ads
Breaking News

ಯೋಧರ ಮೇಲೆ ನಡೆದ ಭಯೋತ್ಪಾದಕ ದಾಳಿ : ಕುಂದಾಪುರದಲ್ಲಿ ಮೊಂಬತ್ತಿ ಬೆಳಗಿ ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ

ಕುಂದಾಪುರ: ಉಗ್ರರ ದಾಳಿಗೆ ಸಾವನ್ನಪ್ಪಿದ ಭಾರತೀಯ ಯೋಧರಿಗೆ ಮೊಂಬತ್ತಿ ಬೆಳಗಿ ಪಕ್ಷ ಭೇದ ಮರೆತು ಎಲ್ಲಾ ಪಕ್ಷದ ಕಾರ್ಯಕರ್ತರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಜೊತೆಯಾಗಿ ಹುತಾತ್ಮ ಯೋಧರಿಗೆ ಕುಂದಾಪುರದಲ್ಲಿ ನಿನ್ನೆ ಸಂಜೆ ಶ್ರದ್ದಾಂಜಲಿ ಅರ್ಪಿಸಲಾಯಿತು. ಇದಕ್ಕೂ ಮೊದಲು ಶಾಸ್ತ್ರೀ ವೃತ್ತದಿಂದ ಮೊಂಬತ್ತಿ ಹಿಡಿದು ಸಾಗಿದ ಬೃಹತ್ ರ್‍ಯಾಲಿ ಮುಖ್ಯರಸ್ತೆಯಲ್ಲಿ ಸಂಚರಿಸಿ ಪಾರಿಜಾತ ಸರ್ಕಲ್ ಸುತ್ತುವರಿದು ಬಳಿಕ ಶಾಸ್ತ್ರೀ ವೃತ್ತದಲ್ಲಿ ಶ್ರದ್ದಾಂಜಲಿ ಸಭೆ ನಡೆಸಲಾಗಿದ್ದು, ಅಗಲಿದ ಹುತಾತ್ಮರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. 

ಪತ್ರಕರ್ತ ರಾಮಕೃಷ್ಣ ಹೇರಳೆ, ಆರೆಸ್ಸೆಸ್ ಮುಖಂಡ ವಾದಿರಾಜ್ ಭಟ್, ಸಂಘಟಕರಾದ ರಾಜೇಶ್ ಕಾವೇರಿ, ಬಿ.ಕಿಶೋರ್ ಕುಮಾರ್, ಗಣೇಶ್ ಮೆಂಡನ್, ರಾಜೇಶ ವಡೇರಹೋಬಳಿ, ಗಿರೀಶ್ ಜಿಕೆ, ಗಿರೀಶ್ ಕುಂದಾಪುರ, ಸುರೇಶ್ ಕಲ್ಲಾಗರ, ಎಚ್ ನರಸಿಂಹ, ರಾಜಾ ಮಠದಬೆಟ್ಟು, ರಾಜಾ ಬಿಟಿಆರ್, ಯಾಕೂಬ್ ಖಾದರ್ ಗುಲ್ವಾಡಿ, ಉದಯ ಶೆಟ್ಟಿ ಪಡುಕೆರೆ, ದೀಪಕ್ ಬೈಂದೂರು, ವಿನೋದ್ ಕ್ರಾಸ್ತಾ ಮೊದಲಾದವರು ಇದ್ದರು.

Related posts

Leave a Reply

Your email address will not be published. Required fields are marked *