Header Ads
Header Ads
Breaking News

ಯೋಧರ ಮೇಲೆ ನಡೆದ ಭಯೋತ್ಪಾದಕ ದಾಳಿ : ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಸದಸ್ಯರಿಂದ ನಮನ

ಬಂಟ್ವಾಳ: ಜಮ್ಮುವಿನ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರ ಬಾಂಬ್‌ದಾಳಿಗೆ ಪ್ರಾಣರ್ಪಣೆ ಮಾಡಿದ ಸಿಆರ್‌ಪಿಎಫ್‌ನ ವೀರ ಯೋಧರಿಗೆ ದೇಶವೇ ಕಂಬನಿ ಮಿಡಿಯುತ್ತಿದ್ದು ರಾತ್ರಿ ಬಂಟ್ವಾಳದ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಸದಸ್ಯರು ದಡ್ಡಲಕಾಡು ಶಾಲಾ ಮೈದಾನದಲ್ಲಿ ಹಣತೆ ಬೆಳಗಿ ಶ್ರದ್ದಾಂಜಲಿ ಸಲ್ಲಿಸಿದರು.

ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಶಾಲಾ ಮೈದಾನದಲ್ಲಿ ಜಮಾಯಿಸಿದ ಕ್ಲಬ್‌ನ ಸದಸ್ಯರು ಮಾನವ ಸರಪಳಿ ನಡೆಸಿ ಭಾರತೀಯರಾದ ನಾವೆಲ್ಲರೂ ಯೋಧರ ಜೊತೆಗಿದ್ದೇವೆ ಎನ್ನುವ ಸಂದೇಶ ಸಾರಿದರು. ಬಳಿಕ ಹಣತೆಯನ್ನು ಹಚ್ಚಿ ಹುತಾತ್ಮ ವೀರ ಯೋಧರಿಗೆ ಭಾವಪೂರ್ಣ ಶ್ರದ್ದಾಂಜಲಿಯನ್ನು ಅರ್ಪಿಸಿದರು. ಈ ಸಂದರ್ಭ ಪುಟ್ಟ ಬಾಲಕಿಯೊಬ್ಬಳು ಹಣತೆಯ ಮುಂದೆ ನಿಂತು ಸೆಲ್ಯೂಟ್ ಹೊಡೆದು ಭಾರತಾಂಬೆಗೆ ಜಯಘೋಷ ಮಾಡಿದ ದೃಶ್ಯ ಗಮನ ಸೆಳೆಯಿತು. ಕ್ಲಬ್ ಸದಸ್ಯರಾದ ಪುರುಷೋತ್ತಮ ಅಂಚನ್, ರಾಮಚಂದ್ರ ಪೂಜಾರಿ ಕರೆಂಕಿ, ನವೀನ್ ಸೇಸಗುರಿ ಮತ್ತಿತರ ಪ್ರಮುಖರು ಹಾಜರಿದ್ದರು.

Related posts

Leave a Reply

Your email address will not be published. Required fields are marked *