Header Ads
Header Ads
Breaking News

ಯೋಧ ಅಭಿನಂದನ್ ತೋರಿದ ಧೈರ್ಯ ಮೆಚ್ಚುವಂತದ್ದು : ಪೇಜಾವರ ಮಠಾದೀಶ ವಿಶ್ವೀಶತೀರ್ಥ ಶ್ರೀಪಾದ

 ಯೋಧ ಅಭಿನಂದನ್ ತೋರಿದ ಧೈರ್ಯ ಮೆಚ್ಚುವಂತದ್ದು , ಶತ್ರುಗಳ ದೇಶದಲ್ಲಿ ಆತ ವರ್ತಿಸಿದ ರೀತಿ ದೇಶದ ಗೌರವ ಹೆಚ್ಚಿಸಿದೆ ಅಂತ ಪೇಜಾವರ ಮಠಾದೀಶ ವಿಶ್ವೀಶತೀರ್ಥ ಶ್ರೀಪಾದರು ತಿಳಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ಅಭಿನಂದನ್‌ಗೆ ಸಾವಿರ ಸಾವಿರ ಅಭಿನಂದನೆಗಳು, ಜೇಬಲ್ಲಿದ್ದ ಕಾಗದ ಪತ್ರ ನುಂಗಿ ದೇಶದ ಕಾಳಜಿ ತೋರಿದ್ದಾರೆ ಎಂದರು. ಪಾಕಿಸ್ತಾನದ ಜೊತೆ ಯುದ್ಧ ಬೇಡ. ಯುದ್ಧದಿಂದ ಸಾವಿರಾರು ಸಾವು ನೋವುಗಳು ಸಂಭವಿಸುತ್ತದೆ. ಯುದ್ಧದಿಂದ ನಮ್ಮ ಸೈನಿಕರ ಸಾವಾಗುತ್ತದೆ. ಆತ್ಮಾಭಿಮಾನಕ್ಕೆ ಚ್ಯುತಿಬಾರದ ರೀತಿಯಲ್ಲಿ ಶಾಂತಿ ಸ್ಥಾಪನೆಯಾಗಲಿ. ಮೋದಿಗೆ ನನ್ನ ಅಭಿನಂದನೆ, ಅಭಿವೃದ್ಧಿ ಮತ್ತು ಧೈರ್ಯ. ದಿಟ್ಟತನವನ್ನು ನಾನು ಮೆಚ್ಚುತ್ತೇನೆ. ಮೋದಿ ಸೂಕ್ತ ಸಮಯದಲ್ಲಿ ಪ್ರಧಾನಿಯಾಗಿದ್ದಾರೆ ಎಂದರು. 

ಯಡಿಯೂರಪ್ಪ 22 ಸೀಟು ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರೀಯಿಸಿದ ಅವರು ಇದೊಂದು ಚಿಕ್ಕ ವಿಚಾರ, ದೊಡ್ಡ ವಿಷಯವಲ್ಲ, ಇಂದಿರಾಗಾಂಧಿ ಆಳ್ವಿಕೆ ಸಂದರ್ಭ ಯುದ್ಧ ಆಗಿದೆ. ಆಗ ಕಾಂಗ್ರೆಸ್‌ಗೆ ಉಪಯೋಗವಾಗ್ತದೆ ಅಂತ ಎಲ್ಲರು ಹೇಳಿಕೊಂಡಿದ್ದರು. ಬಿಎಸ್ ವೈ ಹೇಳಿಕೆಯನ್ನು ದೊಡ್ಡ ವಿಷಯ ಮಾಡಬೇಕಾಗಿಲ್ಲ. ಉಗ್ರರ ಸಂಹಾರ ಆಗಬೇಕು. ಅಮಾಯಕರ ಹತ್ಯೆ ಆಗಬಾರದು. ಉಗ್ರರನ್ನು ಹುಡುಕಿ ಕೊಲ್ಲಬೇಕು. ಸೈನಿಕರ ಸರ್ಜಿಕಲ್ ಸ್ಟ್ರೈಕ್‌ಗೆ ಅಭಿನಂದಿಸ್ತೆನೆ ಎಂದ ಅವರು ದೇಶದ ಬುದ್ಧಿಜೀವಿಗಳು ಬಗ್ಗೆ ತಿರಸ್ಕಾರ ಉಂಟಾಗಿದೆ. ಇಂತಹ ಸಂದರ್ಭದಲ್ಲೂ ಅವರಿಗೆ ದೇಶಾಭಿಮಾನ ಇಲ್ಲ. ಬುದ್ಧಿಜೀವಿಗಳಿಗೆ ಒಳ್ಳೆ ಬುದ್ದಿ ಕೊಡಬೇಕು. ಬುದ್ಧಿಜೀವಿಗಳು ದುರ್ಬುದ್ಧಿ ಜೀವಿಗಳು ಆಗಬಾರದು ಬುದ್ದಿಜೀವಿಗಳಿಗೆ ಸದ್ಭುದ್ದಿಜೀವಿಗಳಾಗಲಿ ಬುದ್ದಿಜೀವಿಗಳಿಗೆ ದೇವರಲ್ಲಿ ನಾನು ಪ್ರಾರ್ಥನೆ ಮಾಡುತ್ತೇನೆ ಎಂದರು.

Related posts

Leave a Reply

Your email address will not be published. Required fields are marked *