Header Ads
Header Ads
Header Ads
Breaking News

ರಂಗಭೂಮಿ ಸಂಬಂಧಗಳನ್ನು ಬೆಸೆಯುವ ಕೊಂಡಿ : ಪ್ರಸಿದ್ಧ ರಂಗ ನಿರ್ದೇಶಕ ನಟರಾಜ ಹೊನ್ನವಳ್ಳಿ ಹೇಳಿಕೆ

ರಂಗಭೂಮಿ ನಾಟಕಗಳು ಕೇವಲ ಸಾಂಸ್ಕೃತಿಕ ಕಲಾಪ್ರಕಾರವಾಗಿರದೇ ಸಂಬಂಧಗಳನ್ನು ಬೆಸೆಯುವ ಕೊಂಡಿಯಾಗಿ ಕೆಲಸ ಮಾಡುತ್ತದೆ ಎಂದು ತುಮಕೂರಿನ ಪ್ರಸಿದ್ದ ರಂಗ ನಿರ್ದೇಶಕ ನಟರಾಜ ಹೊನ್ನವಳ್ಳಿ ಹೇಳಿದರು. ಅವರು ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಇದರ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ರಂಗಭೂಮಿ ನಾಟಕಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದರ ಜೊತೆಗೆ ಸಮಾಜ ವಿಮರ್ಶೇ ಮತ್ತು ವ್ಯಕ್ತಿ ವಿಮರ್ಶೆಗಳನ್ನು ಮಾಡುವ ಮೂಲಕ ನಾಟಕ ಸಂಸ್ಕೃತಿಯ ಹೂರಣವಾಗಿದೆ ಎಂದು ಹೇಳಿದರು ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ ಮನುಷ್ಯರನ್ನು ಮನುಷ್ಯರನ್ನಾಗಿ ತೋರಿಸುವ ಕಲೆ ಇದ್ದರೆ ಅದು ರಂಗಭೂಮಿ ನಾಟಕಗಳು ಮಾತ್ರ ಎಂದು ಹೇಳಿದರು.ಕರ್ನಾಟಕ ಅರೆಭಾ಼ಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಸುಳ್ಯ ನಗರ ಪಂಚಾಯಿತಿ ಸದಸ್ಯ ಬುದ್ಧ ನಾಯ್ಕ್, ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷ ಜೀವನ್ ರಾಂ ಸುಳ್ಯ, ಸದಸ್ಯರಾದ ಕೆ. ಕೃಷ್ಣಮೂರ್ತಿ, ಹಾಗೂ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *