Header Ads
Header Ads
Breaking News

ರಂಗಮನೆಯಲ್ಲಿ ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವ ರಂಗಸಂಭ್ರಮ ಬಹುತ್ವದ ಪರಿಕಲ್ಪನೆಯಲ್ಲಿ ರಂಗಕಲೆ ಜೀವಂತ ಬೆಳಗಾವಿ ಹಿರಿಯ ನಾಟಕಕಾರ ಡಾ. ಡಿ.ಎಸ್. ಚೌಗಲೆ ಹೇಳಿಕೆ

ಜಾತಿ, ಕೋಮುದ್ವೇಷದ ಮಧ್ಯೆ ವಿಷಬೀಜ ಬಿತ್ತುವ ಇವತ್ತಿನ ದಿನಗಳಲ್ಲಿ ಕಲೆ, ಸಾಹಿತ್ಯ, ರಂಗಕಲೆಗಳು ಜಾತಿ, ಧರ್ಮವನ್ನು ಬೆಸೆಯುವ ಕೆಲಸ ಮಾಡುತ್ತಿದೆ. ಅಂತಹ ಸಾಹಿತ್ಯ ಸಚುವಟಿಕೆಗಳ ಸಾಮಾಜಿಕ ಘಟಕಗಳ ಅವಶ್ಯಕತೆ ಇದೆ. ರಂಗಕಲೆ ಮತ್ತು ಜನಪದ ಕಲೆಗಳು ಬಹುತ್ವದ ಪರಿಕಲ್ಪನೆಯಲ್ಲಿ ಜೀವಂತವಾಗಿದೆ ಎಂದು ಬೆಳಗಾವಿಯ ಹಿರಿಯ ನಾಟಕಕಾರ ಡಾ. ಡಿ.ಎಸ್. ಚೌಗಲೆ ಹೇಳಿದರು.

ಅವರು ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ನಡೆದ ರಂಗಸಂಭ್ರಮ ಮತ್ತು ರಾಜ್ಯ ಮಟ್ಟದ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿ ಅಧಿಕಾರ ಮತ್ತು ಹಣದ ಮಧ್ಯೆ ಸಾಂಸ್ಕೃತಿಕ ನೆಲೆಗಟ್ಟು ಪರಕಲ್ಪನೆಯಲ್ಲಿ ನಕರಾತ್ಮಕ ದೃಷ್ಟಿಕೋನ ಇದೆ. ನಮ್ಮ ಬದುಕಿನ ಜೀವನಕ್ಕೆ ಪ್ರೀತಿ ನೀಡುವ ರಂಗ ಚಟುವಟಿಕೆ ಕಾರ್ಯಕ್ರಮಗಳ ಅಗತ್ಯ ಇದೆ. ಕಲೆ, ಸಾಹಿತ್ಯಗಳು ನಮ್ಮ ಬದುಕಿನ ಭಾಗವಾಗಬೇಕು. ಜಾತಿ, ಕೋಮು ಸಂಘರ್ಷವನ್ನು ಮೀರಿದ ಶಕ್ತಿ ರಂಗಕಲೆಗೆ ಇದೆ ಎಂದು ಹೇಳಿದರು.
ಸಾಂಸ್ಕೃತಿಕ ನೇತಾರ, ಶಿಕ್ಷಣ ತಜ್ಞ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಮೋಹನ ಆಳ್ವರಿಗೆ 2018ರ ರಂಗಮನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೋಹನ್ ಆಳ್ವ ದೇಶದ ರಾಜಕೀಯದಿಂದ ಜನರ ಮಧ್ಯೆ ಕಂದಕ ನಿರ್ಮಾಣವಾಗುತ್ತಿದೆ. ನಾವು ನಂಬಿಕೊಂಡು ಬಂದ ಧರ್ಮ ಕೈತಪ್ಪುತ್ತಿದೆ. ಸಾಮಾಜಿಕ ಮಾದ್ಯಮಗಳ ಸುಳ್ಳು ಸುದ್ದಿ ಹರಡಿಸುವ ಮೂಲಕ ಅಪಪ್ರಚಾರ ಮಾಡುತ್ತಿದೆ. ಇಂತವರಿಗೆ ಕಾಲವೇ ಉತ್ತರ ಕೊಡಲಿದೆ ಎಂದರು.
ಸುಳ್ಯ ಕ್ಷೇತ್ರದ ಶಾಸಕ ಎಸ್. ಅಂಗಾರ ಅಧ್ಯಕ್ಷತೆಯನ್ನು ವಹಿಸಿದರು. .ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಕೆ.ಮೋಹನ ರಾವ್, ಅರಂತೋಡು ಪೊಪ್ಯುಲರ್ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಪಿ.ಬಿ. ದಿವಾಕರ ರೈ, ಕಲಾವಿದ ಸುಜನಾ ಸುಳ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

Related posts

Leave a Reply