Header Ads
Header Ads
Breaking News

ರಂಗಸಂಗಾತಿಯಿಂದ ನಾಟಕ ಪ್ರಿಯರಿಗೆ 2 ದಿನಗಳ ಕಾಲ ರಸದೌತಣ : ಮನರಂಜಿಸಲಿದೆ 2 ನಾಟಕಗಳು

ಮಂಗಳೂರು: ರಂಗಸಂಗಾತಿ ಹಾಗೂ ಕೆನರಾ ಪದವಿಪೂರ್ವ ಕಾಲೇಜು ಜಂಟಿ ಆಶ್ರಯದಲ್ಲಿ ಕೆನರಾ ಪದವಿ ಪೂರ್ವ ಕಾಲೇಜಿನ ಪ್ರಾಂಗಣದಲ್ಲಿ ಡಿಸೆಂಬರ್ 19 ಹಾಗೂ 20 ರಂದು ಎರಡು ನಾಟಕಗಳು ಪ್ರದರ್ಶನಗೊಳ್ಳಲಿವೆ. ಈ ಪ್ರಯುಕ್ತ ನಾಟಕದ ಪೂರ್ವ ಸಿದ್ಧತೆ ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಡಿಸೆಂಬರ್ 19ರಂದು  ಸಂಜೆ 6.30ಕ್ಕೆ ಕೆನರಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು “ಭೂತಕಾಲದ ಕಥೆ” ಎಂಬ ಕನ್ನಡ ನಾಟಕ ಪ್ರದರ್ಶಿಸಲಿದ್ದಾರೆ. ವಿಜಯ ಡೆನ್‍ಡೆತ ಅವರ ಇಂಗ್ಲೀಷ್ ನಾಟಕವನ್ನು ರಂಗಭೂಮಿ ನಿರ್ದೇಶಕ ಯು.ಮೋಹನಚಂದ್ರ ಅವರು ಕನ್ನಡಕ್ಕೆ ರೂಪಾಂತರಿಸಿ ನಿರ್ದೇಶಿಸಿದ್ದಾರೆ.

ಡಿ.20 ರಂದು ರಂಗಸಂಗಾತಿಯ ಕಲಾವಿದರಿಂದ ಸಂಜೆ 6.30 ಕ್ಕೆ “ಸಂಪಿಗೆ ನಗರ ಪೊಲೀಸ್ ಸ್ಟೇಶನ್” ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ. ಶಶಿರಾಜ್‍ರಾವ್ ಕಾವೂರು ಅವರು ರಚಿಸಿರುವ ನಾಟಕವನ್ನು ಮೋಹನಚಂದ್ರ.ಯು ನಿರ್ಧೇಶನ ಮಾಡಿದ್ದಾರೆ. ಎರಡೂ ನಾಟಕಗಳಿಗೆ ಮೈಮ್ ರಾಮದಾಸ್ ಸಂಗೀತ ನಿರ್ದೇಶನವಿದ. ಲಕ್ಷ್ಮಣ್‍ಕುಮಾರ್ ಮಲ್ಲೂರು,ಚಂದ್ರಹಾಸ್ ಉಳ್ಳಾಲ್,ಗೋಪಿನಾಥ್ ಭಟ್,ಸಂತೋಷ್ ಶೆಟ್ಟಿ,ಸುಧಾಕರ್ ಸಾಲಿಯಾನ್,ರಂಜನ್ ಬೋಳೂರು,ಪ್ರಭಾಕರ ಕಾಪಿಕಾಡ್,ಮುರಳೀಧರ ಕಾಮತ್,ಶ್ರೀನಿವಾಸ್ ಕುಪ್ಪಿಲ,ಮೈಮ್ ರಾಮದಾಸ್,ಶಶಿರಾಜ್‍ರಾವ್ ಕಾವೂರು ನಾಟಕದ ಕಲಾವಿದರಾಗಿ ಅಭಿನಯಿಸಿದ್ದಾರೆ.

 

ಎರಡೂ ನಾಟಕಗಳಿಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು ನಾಟಕ ವೀಕ್ಷಿಸಲು ನಾಟಕ ಪ್ರೇಮಿಗಳು ಆಗಮಿಸಬೇಕೆಂದು ಕಾಲೇಜು ಡೀನ್ ಹಾಗೂ ರಂಗಸಂಗಾತಿ ಅಧ್ಯಕ್ಷರಾದ ಗೋಪಾಲ್‍ಕೃಷ್ಣ ಶೆಟ್ಟಿ ಹೇಳಿದರು. ಇನ್ನೂ 2 ದಿನಗಳ ಕಾಲ ನಾಟಕ ಪ್ರಿಯರಿಗೆ ರಸದೌತಣ ಸಿಗಲಿದೆ.

Related posts

Leave a Reply