Header Ads
Header Ads
Header Ads
Breaking News

ರಂಗೇರುತ್ತಿರುವ ಚುನಾವಣಾ ಕಣ ಬೈಂದೂರು ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಚಿತ್ತೂರು ನಾಗರಾಜ ಶೆಟ್ಟಿ ಪಕ್ಷೇತರ ಅಭ್ಯರ್ಥಿಯಾಗಿ ತಯಾರಿ

ವಿಧಾನಸಭಾ ಕ್ಷೇತ್ರದ ಚುನಾವಣಾ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ತೆರೆಮರೆಯಲ್ಲಿ ಚುನಾವಣೆಗೆ ಸ್ಪರ್ಧಾಳುಗಳ ತಾಲೀಮು ನಡೆಯುತ್ತಿದೆ. ಕಾಂಗ್ರೆಸ್ -ಬಿಜೆಪಿ ನಡುವೆ ಜಟಿಲ ಸಮರದ ಕ್ಷೇತ್ರವಾಗಿರುವ ಬೈಂದೂರು ಕ್ಷೇತ್ರದಲ್ಲಿ ಸ್ಪರ್ಧೆ ನೀಡಲು ಪಕ್ಷೇತರ ಅಭ್ಯರ್ಥಿಯೊಬ್ಬರು ಈಗಾಗಲೇ ರಣತಯಾರಿ ನಡೆಸುತ್ತಿದ್ದಾರೆ.

ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಯುವಕ ಚಿತ್ತೂರು ನಾಗರಾಜ ಶೆಟ್ಟಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಮುಂದಾಗಿದ್ದಾರೆ. ಈಗಾಗಲೇ ಆ ಕುರಿತು ಪೂರ್ವಭಾವಿ ಸಭೆಗಳನ್ನು ನಡೆಸಿದ್ದು, 50 ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಇವರನ್ನು ಬೆಂಬಲಿಸಿವೆ ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರಾದ್ಯಂತ ತಿರುಗಾಟ ನಡೆಸಿ ಕಾರ್ಯಕರ್ತರ ಸಭೆಯನ್ನು ನಡೆಸಿ, ಚುನಾವಣೆಗೆ ಸಿದ್ಧತೆ ನಡೆಸಲಾಗುವುದು ನಾಗರಾಜ ಶೆಟ್ಟಿಯವರ ಮಾಧ್ಯಮ ಸಲಹೆಗಾರ ಕೋಡಿ ನಾಗೇಶ ಕಾಮತ್ ತಿಳಿಸಿದ್ದಾರೆ.
ವರದಿ: ತುಂಗಾ ಕುಂದಾಪುರ

Related posts

Leave a Reply