Header Ads
Header Ads
Breaking News

ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ದಶಮಾನೋತ್ಸವ

ಮಂಗಳೂರಿನ ಪ್ರತಿಷ್ಠಿತ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಂಸ್ಥೆ, ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ದಶಮಾನೋತ್ಸವದ ಹೊಸ್ತಿಲಲ್ಲಿದ್ದು, ಸೆ.೧೬ರಂದು ವಿನೂತನ ಕಾರ್ಯಕ್ರಮ ನಡೆಯಲಿದೆ ಎಂದು ಗಾಯಕ ಮೈಮ್ ರಾಮ್‌ದಾಸ್ ಮಾಹಿತಿ ನೀಡಿದರು.ಈ ಬಗ್ಗೆ ಮಂಗಳೂರಿನ ಪ್ರತಿಕಾಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ರಂಗ ಸಂಗಾತಿಯ ಹತ್ತು ವರ್ಷಗಳ ನಡೆಯ ಹಾದಿಯನ್ನು ಮೆಲುಕು ಹಾಕುವ ದಶಮಾನೋತ್ಸವದ ಸ್ಮರಣ ಸಂಚಿಕೆ- ರಂಗಮದಿಪನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಅವರು ಬಿಡುಗಡೆಗೊಳಿಸಲಿದ್ದಾರೆ ಎಂದರು.ಆನಂತರ ಸಾಹಿತಿ ಶಶಿರಾಜ್ ಕಾವೂರು ಮಾತನಾಡಿ, ಹಿರಿಯ ರಂಗಕರ್ಮಿ ದಿವಂಗತ ಭಾಸ್ಕರ ನೆಲ್ಲಿತೀರ್ಥರವರ ನೆನಪಿನಲ್ಲಿ ನೀಡಲಾಗುವ ರಂಗ ಭಾಸ್ಕರ 2016-17ನೇ ಸಾಲಿನ ಪ್ರಶಸ್ತಿಯನ್ನು ಹಿರಿಯ ರಂಗನಟಿ ಮತ್ತು ಗಾಯಕಿ ರೋಹಿಣಿ ಜಗರಾಮ್ ಅವರಿಗೂ 2017-18ನೇ ಸಾಲಿನ ಪ್ರಶಸ್ತಿಯನ್ನು ರಂಗ ನಿರ್ದೇಶಕ ಜಗನ್ ಪವಾರ್ ಬೇಕಲ್‌ಗೆ ನೀಡಿ ಪುರಸ್ಕರಿಸಲಾಗುವುದು. ಚಿತ್ರನಟ ಸುಂದರ್‌ರಾಜ್ ಅವರು ಸನ್ಮಾನಿತರಿಗೆ ಪ್ರಶಸ್ತಿ ಪ್ರದಾನ ಮಾಡಲಿರುವರು ಎಂದು ಮಾಹಿತಿ ನೀಡಿದರು.ಈ ಸಂದರ್ಭ ಮಾಧ್ಯಮಗೋಷ್ಟಿಯಲ್ಲಿ ರಂಗ ಸಂಗಾತಿಯ ವಿಶ್ವಸ್ಥ ಮಂಡಳಿಯ ಗೋಪಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

Related posts

Leave a Reply