Breaking News

ರಂಜಾನ್ ಪ್ರಭಾಷಣೆ ಸಿದ್ದತೆಗಳು ಪೂರ್ಣ: ನೇತಾರರಿಂದ ಪತ್ರಿಕಾ ಗೋಷ್ಟಿ

ಮಂಜೇಶ್ವರ: ಎಸ್ ಕೆ ಎಸ್ ಎಸ್ ಎಫ್ ಮಂಜೇಶ್ವರ ವಲಯ ಇದರ ನೇತೃತ್ವದಲ್ಲಿ ಖಲೀಲ್ ಹುದವಿಯವರ ರಂಜಾನ್ ಪ್ರಭಾಷಣೆಗೆ ಸಿದ್ದತೆಗಳು ಪೂರ್ಣಗೊಂಡಿರುವುದಾಗಿ ಸಂಬಂಧಪಟ್ಟವರು ಮಂಜೇಶ್ವರ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಜೂನ್ ೩ ರಂದು ಶನಿವಾರ ಬೆಳಿಗ್ಗೆ ಮಜ್ಲಿಸುನ್ನೂರಿನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರಕಲಿದೆ. ಪ್ರಮುಖ ಪಂಡಿತರು ಮಜ್ಲಿಸುನ್ನೂರಿಗೆ ನೇತೃತ್ವ ನೀಡಲಿದ್ದಾರೆ. ಬಳಿಕ ಖಲೀಲ್ ಹುದವಿಯವರ ಪ್ರಭಾಷಣೆ ಆರಂಭಗೊಳ್ಳಲಿದೆ.
ನಾಲ್ಕು ದಿವಸಗಳಲ್ಲಾಗಿ ನಡೆಯುವ ಕಾರ್ಯಕ್ರಮದಲ್ಲಿ ಸೂರತ್ ಯಾಸೀನ್ ಆತ್ಮದೊಂದಿಗೆ ಮಾತನಾಡುತ್ತಿದೆ ಎಂಬ ವಿಷಯದ ಬಗ್ಗೆ ಹುದವಿಯವರು ಮಾತನಾಡಲಿದ್ದಾರೆ. ಪತ್ರಿಕಾ ಗೋಷ್ಟಿಯಲ್ಲ್ ಇಸ್ಮಾಯಿಲ್ ಅಝ್ಹರಿ, ಕಜ ಮೊಹಮ್ಮದ್ ಫೈಝಿ, ಅಝಿಝ್ ಹಾಜಿ, ಸಿದ್ದೀಖ್ ಅಝ್ಹರಿ, ಇಸ್ಮಾಯಿಲ್, ಇಬ್ರಾಹಿಂ ಹಾಜಿ, ಅಬ್ದುಲ್ ರಹ್ಮಾನ್ ಹಾಜಿ ಮೊದಲಾದವರು ಉಪಸ್ಥರಿದ್ದರು

Related posts

Leave a Reply