Header Ads
Header Ads
Breaking News

ರಕ್ತದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಬೇಧಬಾವ ಇಲ್ಲ:ಪ್ಯಾರಿಜಾನ್ ಹೇಳಿಕೆ

ಹಿಂದೂ ಮುಸ್ಲಿಂ ಕ್ರೈಸ್ತ ಎಂಬ ಬೇಧಬಾವ ರಕ್ತದಲ್ಲಿಲ್ಲ, ರಕ್ತವನ್ನು ಗುರುತಿಸೋಕೆ ಬೇರೆ ಬೇರೆ ಗುಂಪುಗಳಿರಬಹುದು, ತಮ್ಮ ರಾಜಕೀಯ ಲಾಭಕ್ಕಾಗಿ ಕೋಮುವಾದಿ ಪಕ್ಷ ಬಿಜೆಪಿ ಹಿಂದೂ ಮುಸ್ಲಿಂ ಎಂಬುದಾಗಿ ನಮ್ಮೋಳಗೆ ಧ್ವೇಶ ಬಾವನೆ ಹುಟ್ಟು ಹಾಕುತ್ತಿದೆ. ಕೋಮುವಾದಿಗಳ ಈ ಅವಕಾಶ ವಾದವನ್ನು ಜನ ಅರ್ಥ ಮಾಡಿಕೊಂಡು ಅವರಿಗೆ ತಕ್ಕ ಪಾಠ ಕಲಿಸುವ ಅನಿರ್ವಾಯತೆ ಇದೆ ಎಂಬುದಾಗಿ, ಕಾಂಗ್ರೆಸ್ ಸೇವಾದಳದ ರಾಜ್ಯ ಮುಖ್ಯ ಸಂಘಟಕರಾದ ಪ್ಯಾರಿಜಾನ್ ಹೇಳಿದರು.ಅವರು ಎರ್ಮಾಳು ರಾಜೀವಗಾಂಧಿ ಹಾಲ್‌ನಲ್ಲಿ ಸೇವಾದಳ ಆಯೋಜಿಸಿದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ರಕ್ತಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆಗಳಿಲ್ಲ, ಆರೋಗ್ಯವಂತರು ಇಂಥಹ ಶಿಬಿರಗಳಲ್ಲಿ ದಾನವಾಗಿ ರಕ್ತ ನೀಡಿದರೆ ಮಾತ್ರ ತುರ್ತು ಸಂದರ್ಭದಲ್ಲಿ ಅದೇಷ್ಟೋ ಪ್ರಾಣಗಳನ್ನು ಉಳಿಸಲು ಸಾಧ್ಯ, ರಕ್ತ ನೀಡುವುದರ ಮೂಲಕ ಹೊಸ ರಕ್ತ ಉತ್ಪಾದನೆಗೆ ಅವಕಾಶ ಕಲ್ಪಿಸುವಂತ್ತಾಗಿದ್ದು, ಇದರಿಂದ ನಾವು ಉತ್ತಮ ಆರೋಗ್ಯವನ್ನು ಪಡೆಯಬಹುದೆಂದರು.

ನೂರಾರು ದಾನಿಗಳು ಈ ರಕ್ತದಾನ ಶಿಬಿರದಲ್ಲಿ ರಕ್ತ ನೀಡುವ ಮೂಲಕ ಈ ಶಿಬಿರ ಯಶಸ್ವಿಯಾಗಿದೆ. ಈ ಸಂದರ್ಭ ಶಿಬಿರ ಸಂಘಟಕ, ಅಶೋಕ್ ಕುಮಾರ್ ಕೊಡವೂರು, ಪ್ರಮುಖರಾದ ವಿನಾಯಕ ಮೂರ್ತಿ, ವಿಶ್ವನಾಥ್, ಕಿಶೋರ್ ಎರ್ಮಾಳು, ರತ್ನಾಕರ್ ಕೋಟ್ಯಾನ್, ನವೀನ್‌ಚಂದ್ರ ಸುವರ್ಣ, ನವೀನ್‌ಚಂದ್ರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply