Header Ads
Header Ads
Breaking News

ರಕ್ತದ ಕ್ಯಾನ್ಸರ್‍ನಿಂದ ಬಳಲುತ್ತಿರುವ ಆದಿಲ್ : ಹೆತ್ತವರ ಕಣ್ಣೀರೊರೆಸುತ್ತಿರುವ ಶಾಲಾ ಸಮಸ್ತರು

ಉಡುಪಿಯ ಕ್ರಿಶ್ಚಿಯನ್ ಆಂಗ್ಲ ಮಾಧ್ಯಮ ಶಾಲೆಯ 1ನೇ ತರಗತಿಯಲ್ಲಿ ಕಲಿಯುತ್ತಿರುವ ಆದಿಲ್ ಥಾಮಸ್ ಎಂಬ ಮಗು ರಕ್ತದ ಕ್ಯಾನ್ಸರ್‍ನಿಂದ ಬಳಲುತ್ತಿದೆ. ಮಾನವೀಯ ನೆಲೆಯಲ್ಲಿ ಇಡೀ ಶಾಲೆಯ ಅಧ್ಯಾಪಕ ವೃಂದ, ಆಡಳಿತ ಮಂಡಳಿ, ಪೋಷಕರು , ಮುಖ್ಯೋಪಧ್ಯಾಯರು, ಶಾಲಾ ಅಭಿಮಾನಿಗಳು ಮಗುವಿನ ಹೆತ್ತವರ ಬೆಂಬಲಕ್ಕೆ ನಿಂತಿದ್ದಾರೆ.


ಈಗಾಗಲೇ ಮಗುವಿನ ಆರೋಗ್ಯಕ್ಕಾಗಿ ಎಲ್ಲಾ ಪೋಷಕರು ಸಹಾಯಧನ ನೀಡಿದ್ದು ಇದರ ಜೊತೆಗೆ ಶಾಲೆಯ ಸಿಬ್ಬಂದಿಗಳು, ಅದ್ಯಾಪಕರ ವೃಂದ, ಶಾಲಾ ಸಂಚಾಲಕರು, ಆಡಳಿತ ಮಂಡಳಿ, ಶಾಲೆಯ ಅಭಿಮಾನಿಗಳು, ಮುಖ್ಯೋಪಧ್ಯಾಯರು ವೈಯಕ್ತಿಕ ನೆಲೆಯಲ್ಲೂ ಸಹಾಯಧನ ಮಾಡಿದ್ದು ಒಟ್ಟು 1,89,751 ರೂ ಸಂಗ್ರಹವಾಗಿದೆ. ಮೊದಲ ಹಂತದಲ್ಲಿ ಅರುವತ್ತೈದು ಸಾವಿರ ಮಗುವಿನ ಕುಟುಂಬಕ್ಕೆ ನೀಡಲಾಗಿದ್ದು ಇಂದು ಮತ್ತೆ ಉಳಿದ ಸುಮಾರು 1,24,751 ಹಣವನ್ನು ಶಾಲೆಯಲ್ಲಿ ಮಗುವಿನ ಮಾವ ರೋಶನ್ ಮೂಲಕ ಹೆತ್ತವರಿಗೆ ಹಸ್ತಾಂತರಿಸಲಾಯಿತು. ಅದಿಲ್ ಥಾಮಸ್ ಕುಂದಾಪುರದ ಜಡ್ಕಲ್ ನಿವಾಸಿಗಳಾದ ಅನಿಲ್ ಥಾಮಸ್ ಹಾಗೂ ಲಿಂಟಾ ಅನಿಲ್ ಅವರ ಪುತ್ರನಾಗಿದ್ದು ಉಡುಪಿಯಲ್ಲಿ ವಾಸವಾಗಿದ್ದರು. ಆದಿಲ್ ಗೆ ಕಳೆದ ಒಂದು ತಿಂಗಳಿನಿಂದ ಚಿಕಿತ್ಸೆ ನಡೆಯುತ್ತಿದೆ. ದಾನಿಗಳು ಈ ಮಗುವಿಗೆ ಸಹಾಯವನ್ನು ಈ ಕೆಳಗಿನ ವಿಳಾಸಕ್ಕೆ ಮಾಡಬಹುದಾಗಿದೆ.

Anil thomas.

a/c 1402500102357101

ifsc.KARB0000140.

Karnataka Bank kundapura

ದೂರವಾಣಿ ಸಂಖ್ಯೆ : Anil thomos /9449292640 /8088306528

Related posts

Leave a Reply

Your email address will not be published. Required fields are marked *