Header Ads
Header Ads
Breaking News

ರಕ್ತ ಕೊಟ್ಟೇವು.. ಪಿಂಚಣಿ ಬಿಡೆವು ಚಳವಳಿ ನೂತನ ಆಂದೋಲನಕ್ಕೆ ನಾಂದಿ: ಕೋಟ ಶ್ರೀನಿವಾಸ್ ಪೂಜಾರಿ

ಕುಂದಾಪುರ: ಸರ್ಕಾರಿ ನೌಕರರ ಜೀವನ ಭದ್ರತೆ ಇರುವುದು ನಿವೃತ್ತಿಯ ನಂತರ ಅವರಿಗೆ ಸಿಗುವ ಪಿಂಚಣಿಯಿಂದ. ಎನ್‌ಪಿಎಸ್ ವ್ಯವಸ್ಥೆಯಲ್ಲಿ ಶೇ.೧೦ ರಷ್ಟು ಹಣ ಹೂಡಿಕೆ ಮಾಡಿ ಅದಕ್ಕೆ ಶೇ.40 ರಷ್ಟು ಸೇರಿಸಿ ಪಿಂಚಣಿ ರೂಪದಲ್ಲಿ ನೀಡುವುದಾಗಿದ್ದು, ಆರ್ಥಿಕ ಏರುಪೇರಾದರೆ ನೌಕರರ ಪಿಂಚಣಿ ಹಣವೇ ಮಾಯವಾದರೂ ಅಚ್ಚರಿಯಿಲ್ಲ. ಇದರಿಂದ 2ಲಕ್ಷಕ್ಕೂ ಮಿಕ್ಕಿ ನೌಕರರು ಬೀದಿಗೆ ಬರುತ್ತಿದ್ದು, ಸರ್ಕಾರ ಈ ಧೋರಣೆ ಸರಿಯಲ್ಲ. ಹೀಗಾಗಿ ಹಿಂದಿರುವ ಪಿಂಚಣಿ ವ್ಯವಸ್ಥೆ ಮುಂದುವರಿಸಬೇಕೆಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.

ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ ಉಡುಪಿ ಜಿಲ್ಲೆ ಹಾಗೂ ಕುಂದಾಪುರ ತಾಲೂಕು ಘಟಕ, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ರಕ್ತನಿಧಿ ಘಟಕ ಕುಂದಾಪುರ ಶಾಖೆ ಆಶ್ರಯದಲ್ಲಿ ಭಂಡಾರ್‌ಕಾರ್‍ಸ್ ಕಾಲೇಜಿನ ಕೋಯಕುಟ್ಟಿ ಹಾಲ್‌ನಲ್ಲಿ ಬುಧವಾರ ನಡೆದ ರಕ್ತ ಕೊಟ್ಟೇವು ಪಿಂಚಣಿ ಬಿಡೆವು ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ರಾಜ್ಯ ಎನ್‌ಪಿಎಸ್ ನೌಕರರ ಸಂಘ ಕುಂದಾಪುರ ತಾಲೂಕು ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ, ನೌಕರರ ಸಂಘ ಜಿಲ್ಲಾಧ್ಯಕ್ಷ ರಾಘವ ಶೆಟ್ಟಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಅಧ್ಯಕ್ಷ ದಿನಕರ ಶೆಟ್ಟಿ ಮೊದಲಾದವರು ಉಪಸ್ಥಿರಿದ್ದರು.

Related posts

Leave a Reply