Header Ads
Header Ads
Breaking News

ರತ್ನಗಿರಿ ಬೆಟ್ಟದಲ್ಲಿ ಲೇಸರ್ ಶೋಗೆ ಅದ್ಧೂರಿ ಚಾಲನೆ

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಸಂಭ್ರಮದಿಂದ ನಡೆಯುತ್ತಿದೆ. ಮಹೋತ್ಸವದ ಪ್ರಯುಕ್ತ ರತ್ನಗಿರಿ ಬೆಟ್ಟದಲ್ಲಿ ಲೇಸರ್ ಶೋಗೆ ಚಾಲನೆ ನೀಡಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ. ಜಯಮಾಲಾ ಮತ್ತು ಚಿತ್ರನಟ ರಮೇಶ್ ಅರವಿಂದ ಅವರು ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಸಚಿವೆ ಡಾ. ಜಯಮಾಲಾ ಅವರು, ಸರ್ಕಾರ ಮಾಡಬೇಕಾದ ಕೆಲಸಗಳನ್ನು ಡಾ. ಹೆಗ್ಗಡೆ ಅವರು ಮಾಡುತ್ತಿದ್ದಾರೆ. ಆದ್ದರಿಂದ ಡಾ. ಹೆಗ್ಗಡೆ ಅವರ ಸಮಾಜ ಕಾರ್ಯ ಭಾರತಕ್ಕಿಂತಲೂ ಮಿಗಿಲು. ನನ್ನ ಮೊದಲ ನಟನೆಯ ಕಾಸು ದಾಯೆ ಕಂಡಿನ ತುಳು ಚಿತ್ರದ ಚಿತ್ರೀಕರಣ ಇಲ್ಲೇ ನಡೆದಿತ್ತು ಎಂದು ಸ್ಮರಿಸಿದರು.
ಆನಂತರ ಲೇಸರ್ ಶೋ ಗೆ ಚಾಲನೆ ನೀಡಿದ ನಟ ರಮೇಶ್ ಅರವಿಂದ್ ಅವರು ಮಾತನಾಡಿ ಮೂರು ಬಾರಿ ಧರ್ಮಸ್ಥಳದ ಧರ್ಮಾಧಿಕಾರಿಗಳನ್ನು ನನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಲು ಪ್ರಯತ್ನಿಸಿದ್ದೇನೆ. ಮುಂದಿನ ವೀಕೆಂಡ್ ಕಾರ್ಯಕ್ರಮದಲ್ಲಿ ಖಂಡಿತ ಡಾ. ಹೆಗ್ಗಡೆಯವರು ಭಾಗವಹಿಸುವ ಆಶಾವಾದವನ್ನು ಹೊಂದಿದ್ದೇನೆ ಎಂದರು. ನನ್ನ ಸಿನೀಮಾ ಯಶಸ್ಸಿನ ಬೆನ್ನೆಲುಬು ಪ್ರೇಕ್ಷಕರು. ಅಪರಿಚಿತರನ್ನು ಒಂದೇ ಕಡೆ ಸೇರಿಸುವ ಶಕ್ತಿ ಧಾರ್ಮಿಕ ಹಾಗೂ ಸಿನಿಮಾಗಳಿದೆ. ನಾವು ಬಾಹುಬಲಿಯಂತೆ ತ್ಯಾಗಮೂರ್ತಿ ಆಗಬೇಕು. ಬಾಹುಬಲಿಯ ತ್ಯಾಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಬಾಹುಬಲಿ ಶಿಲ್ಪವನ್ನು ಕೆತ್ತಿದ ಶಿಲ್ಪಿ ರೆಂಜಾಳ ಗೋಪಾಲಕೃಷ್ಣ ಅವರ ಪ್ರತಿಮೆಯನ್ನು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಪ್ರೊ. ಎಸ್. ಪ್ರಭಾಕರ್ ಅನಾವರಣಗೊಳಿಸಿದರು.
ರತ್ನಗಿರಿ ಬೆಟ್ಟದಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ ಲೇಸರ್ ಶೋ ನಡೆಸುವ ಮೂಲಕ ಬಾಹುಬಲಿ ಜೀವನ ಜೀವನಗಾಥೆಯನ್ನು ಸಾರುವ ಸಾಹಸವನ್ನ ಮಾಡಲಾಯಿತು. ಸುಮಾರು ಹದಿನೇಳಿ ನಿಮಿಷದ ಈ ಲೇಸರ್ ಧ್ವನಿ ಬೆಳಕಿನ ಸಂಯೋಜನೆಯನ್ನು ಸಮರ್ಥವಾಗಿ ಬಾಹುಬಲಿ ವಿಗ್ರಹದ ಮೂಲಕ ಪ್ರತಿ ಬಿಂಬಿಸಲಾಯಿತು.
ಕಾರ್ಯಕ್ರಮದಲ್ಲಿ ಪದ್ಮವಿಭೂಷಣ ಡಿ. ವೀರೇಂದ್ರ ಹೆಗ್ಗಡೆ, ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ, ಎಂ. ರಾಮಚಂದ್ರ ಕಾರ್ಕಳ, ಆಳ್ವಾಸತಿ ಪ್ರತಿಷ್ಠಾನದ ಅಧ್ಯಕ್ಷರಾದ ಮೋಹನ್ ಆಳ್ವ ಉಪಸ್ಥಿತರಿದ್ದರು.

Related posts

Leave a Reply