Header Ads
Header Ads
Breaking News

ರಫೇಲ್ ಡೀಲ್ ಪ್ರಕರಣ-ಜಂಟಿ ಸದನ ಸಮಿತಿ ರಚಿಸಿ ಪ್ರಕರಣದ ತನಿಖೆ ನಡೆಸಬೇಕು ಕೆಪಿಸಿಸಿ ಪಿಆರ್‌ಓ ಪಲ್ಲಂ ರಾಜು ಒತ್ತಾಯ

ರಫೇಲ್ ಡೀಲ್ ವಿಚಾರದಲ್ಲಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಣೆ ಮಾಡಿರುವುದರಿಂದ ಜಂಟಿ ಸದನ ಸಮಿತಿ ರಚಿಸಿ ಪ್ರಕರಣದ ತನಿಖೆ ನಡೆಸಬೇಕೆಂದು ಕೆಪಿಸಿಸಿ ಪಿಆರ್ ಓ ಹಾಗೂ ಮಾಜಿ ಸಚಿವ ಪಲ್ಲಂ ರಾಜು ಒತ್ತಾಯಿಸಿದ್ದಾರೆ. ಈ ಕುರಿತು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಫೇಲ್ ಒಪ್ಪಂದದಲ್ಲಿ ಕೇಂದ್ರ ಪಾರದರ್ಶಕತೆ ತೋರುತ್ತಿಲ್ಲ. ಕೇಂದ್ರ ಸರಕಾರದ ಸುಳ್ಳು ಅಫಿಡವಿಟನ್ನು ನಂಬಿ ಸುಪ್ರೀಂ ವಿಚಾರಣೆಗೆ ನಿರಾಕರಿಸಿದೆ. ಆದರೆ, ಡೀಲ್‌ನಲ್ಲಿ ಅಷ್ಟು ದೊಡ್ಡ ಮೊತ್ತ ಯಾಕೆ ನಿಗದಿಪಡಿಸಿದ್ದಾರೆಂಬ ಪ್ರಶ್ನೆಗೆ ಸರ್ಮಪಕ ರೀತಿಯಲ್ಲಿ ಉತ್ತರವಿಲ್ಲ. ರಫೇಲ್ ಒಪ್ಪಂದದಲ್ಲಿ ಎಚ್ ಎಎಲ್ ಹೊರಗಿಟ್ಟು ರಿಲಯನ್ಸ್‌ಗೆ ಅವಕಾಶ ನೀಡಿದ್ದು ಯಾಕೆ ಎಂದು ಪ್ರಶ್ನಿಸಿದ ಅವರು, ದೇಶದ ಜನತೆಯ ಪ್ರಶ್ನೆಗೆ ಉತ್ತರ ಸಿಗಲು ಜಂಟಿ ಸದನ ಸಮಿತಿ ತನಿಖೆಯಾಗಬೇಕೆಂದು ಆಗ್ರಹಿಸಿದರು. ಈವೇಳೆ ಮಾಜಿ ಶಾಸಕ ಜೆ.ಆರ್.ಬೋ ಸೇರಿದಂತೆ ಇನ್ನಿತರರ ಕಾಂಗ್ರೆಸ್ ಮುಖಂಡರು ಸುದ್ಧಿಗೋಷ್ಠಿಯಲ್ಲಿ ಹಾಜರಾಗಿದ್ದರು.

Related posts

Leave a Reply