Header Ads
Header Ads
Breaking News

ರಬ್ಬರ್ ಬೆಳೆಗೆ ಧಾರಣೆ ಕುಸಿತ ಅಡಕೆಗೆ ಹಳದಿ ರೋಗ, ಗೇರು ಕೃಷಿಯತ್ತ ಮುಖ ಮಾಡುತ್ತಿರುವ ಸುಳ್ಯದ ರೈತರು

ಸುಳ್ಯ ತಾಲೂಕು ದ. ಕ. ಜಿಲ್ಲೆ ಮತ್ತು ಕೊಡಗು ಜಿಲ್ಲೆಯ ಗಡಿ ಭಾಗ. ಇನ್ನೊಂದೆಡೆ ಕೇರಳ ರಾಜ್ಯದ ಗಡಿಯನ್ನು ಸುತ್ತುವರಿದಿದೆ. ತಾಲೂಕು ಉಷ್ಣ ಭೂಮಿ ಪ್ರದೇಶವಾಗಿರುವ ಕಾರಣ ಸುಳ್ಯದ ಪ್ರತಿಯೊಂದು ಭಾಗವು ಗೇರು ಕೃಷಿಗೆ ಹೇಳಿ ಮಾಡಿಸಿದ ಸ್ಥಳದಂತಿದೆ. ಇಲ್ಲಿ ಮುಖ್ಯವಾಗಿ ಅಡಿಕೆ, ತೆಂಗು, ಬಾಳೆ, ಕೊಕ್ಕೋ, ರಬ್ಬರ್, ಗೇರು ಕೃಷಿ ಮಾಡುತ್ತಾರೆ.
ಸುಮಾರು ೨೦ ವರ್ಷಗಳ ಹಿಂದೆ ಅಡಕೆಗೆ ಬಂದ ಬಂಗಾರದ ಬೆಲೆಯಿಂದ ಈ ಭಾಗದ ರೈತರು ತಾವು ಬೆಳೆಯುತ್ತಿದ್ದ ಭತ್ತದ ಗದ್ದೆಯನ್ನು ಹಿಗ್ಗಾ ಮುಗ್ಗಾ ಹೊಂಡ ತೋಡಿ ಅದರಲ್ಲಿ ಅಡಕೆಯ ವಿವಿಧ ತಳಿಗಳನ್ನು ನಾಟಿ ಮಾಡಿದರು. ಒಂದು ಕಾಲದಲ್ಲಿ ತಾಲೂಕಿನ ಮೂಲೆ ಮೂಲೆ ಭತ್ತದ ಗದ್ದೆಗಳಿಂದ ಕಂಗೊಳಿಸುತ್ತಿದ್ದ ಸುಳ್ಯ ತಾಲೂಕು ಬಳಿಕ ಬರೇ ಅಡಿಕೆ ಗಿಡಗಳನ್ನು ಕಾಣಾಲು ಸಾಧ್ಯವಾಯಿತು. ಹೀಗೆ ಕೆಲ ವರ್ಷಗಳ ಕಾಲ ಅಡಿಕೆ ಕೃಷಿ ಮುಂದುವರಿಯಿತು. ಈಗ ಮತ್ತೆ ಕಳೆದ ೫ ವರ್ಷಗಳಿಂದ ರಬ್ಬರ್ ಧಾರಣೆ ಗಗನಕ್ಕೆ ಏರಿದ ಕಾರಣ ರೈತರು ತಮ್ಮ ಅಡಿಕೆ ತೋಟಗಳನ್ನು, ಗೇರು ತೋಟಗಳನ್ನು ಅಲ್ಲಸ್ವಲ್ಪ ಕಡಿದು ರಬ್ಬರ್ ಗಿಡಗಳನ್ನು ನೆಟ್ಟರು.
ಇದೀಗ ರಬ್ಬರ್ ಧಾರಣೆ ಮತ್ತೆ ಪಾತಾಳಕ್ಕೆ ಕುಸಿದಿದೆ. ಈ ಕಾರಣದಿಂದಲೇ ಇವತ್ತಿನ ದಿನಗಳಲ್ಲಿ ಒಂದಷ್ಟು ಗೇರು ಕೃಷಿ ಉಳಿದುಕೊಂಡಿದೆ. ಕೃಷಿ ಕಾರ್ಮಿಕರಲ್ಲಿ ರಬ್ಬರ್ ಟ್ಯಾಪಿಂಗ್ ಮಾಡಿಸಿದರೆ ಆಧಾಯದ ಶೇ. ೮೦ರಷ್ಟು ಭಾಗ ಅವರಿಗೆ ಕೂಲಿ ನೀಡಲು ಹಣ ಖರ್ಚಾಗುತ್ತದೆ. ರಬ್ಬರ್ ಕೃಷಿಗೆ ಇನ್ನೂ ಬೇರೆ ಖರ್ಚು ತಗಲುತ್ತದೆ. ಇನ್ನೂ ಕೆಲವೆಡೆ ಕೂಲಿ ಕಾರ್ಮಿಕರ ಟ್ಯಾಪರ್‌ಗಳ ಕೊರತೆ ಎದುರಾಗಿದೆ. ಅಲ್ಪಸ್ವಲ್ಪ ರಬ್ಬರ್ ಬೆಳೆ ಇದ್ದವರು ತಾವೇ ಟ್ಯಾಪಿಂಗ್ ಮಾಡಿಕೊಳ್ಳುತ್ತಿದ್ದಾರೆ. ಭವಿಷ್ಯದಲ್ಲಿ ರಬ್ಬರ್ ಬೆಳೆಗಾರರು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮತ್ತೆ ಕೆಲವರು ಗೇರು ಕೃಷಿಯತ್ತ ಮುಖ ಮಾಡಿದ್ದಾರೆ. ಇದರಲ್ಲಿ ಮುಖ್ಯವಾಗಿ ಹೈಬ್ರೆಡ್ ಗೇರು ಕೃಷಿ ನಾಟಿ ಮಾಡಿದ್ದಾರೆ.

Related posts

Leave a Reply