Header Ads
Header Ads
Breaking News

ರಮಾನಾಥ ರೈ ವಿರುದ್ಧ ಹರಿಕೃಷ್ಣ ಬಂಟ್ವಾಳ್ ಆಕ್ರೋಶ, ಪೂಜಾರಿಯರನ್ನು ಅವಾಚ್ಯ ಶಬ್ದಗಳಿಂದ ನಿಂದಸಿದ್ದಕ್ಕೆ ಖಂಡನೆ

ಇಂದು ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಹರಿಕೃಷ್ಣ ಬಂಟ್ವಾಳ್‌ರು ರಮಾನಾಥ್ ರೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನಾರ್ದನ ಪೂಜಾರಿಯವರನ್ನು ಅವಾಚ್ಯ ಶಬ್ದಗಳಿಂದ ರಮಾನಾಥ ರೈ ನಿಂದಿಸಿದ್ದಾರೆ ಎಂದು ರೈ ಅವರು ಸಂಬೋಧಿಸಿದ ಶಬ್ದಗಳನ್ನು ಕಣ್ಣೀರು ಸುರಿಸುತ್ತಾ ಉಲ್ಲೆಖಿಸಿದರು. ಮದುವೆ ಸಮಾರಂಭವೊಂದರಲ್ಲಿ ಯುವ ಕಾಂಗ್ರೆಸ್ ಮುಖಂಡ ಅರುಣ್ ಕುವೆಲ್ಲೊ ಹಾಗೂ ತೇಜಸ್ವಿ ರಾಜ್ ಅವರನ್ನು ಎದುರುಗೊಂಡ ರೈಗಳು ಅವರ ಮುಖ ನೋಡುತ್ತಲೇ ಎಂಚಲ್ಲೆಯ ನಿಕುಲೆನ …. ಕಳ್ಳಿಗೆ, ಓಲುಲ್ಲೆಯ ನಿಕುಲೆನ ಪೂಜಾರಿ ಎಂದು ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ಸಂಬೋಧಿಸಿದರೆಂದು ಹರಿಕ್ರಿಷ್ಣ ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಹರಿಕೃಷ್ಣ ಬಂಟ್ವಾಳ್ ರಮಾನಾಥ ರೈ ಅವರು ಮೊತ್ತಮೊದಲು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ದಿಸಲು ಜನಾರ್ದನ ಪೂಜಾರಿಯವರು ಕಾರಣ ಅವರಿಗೆ ಸ್ಪರ್ಧಿಸಲು ಟಿಕೆಟ್ ಕೊಟ್ಟವರು ಜನಾರ್ದನ ಪೂಜಾರಿಯವರು. ಈ ಮೂಲಕವಾಗಿ ರೈ ಮಂತ್ರಿಯಾಗಿರುವುದರ ಹಿಂದೆ ಪೂಜಾರಿಯವರ ಕೊಡುಗೆ ಇದೆ ಎಂಬುದನ್ನು ರಮಾನಾಥ ರೈ ಅವರು ನೆನಪಿಟ್ಟುಕೊಳ್ಳಬೇಕು ಎಂದು ಹರಿಕೃಷ್ಣ ಬಂಟ್ವಾಳ್ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.

Related posts

Leave a Reply