Header Ads
Header Ads
Header Ads
Breaking News

ರಮೇಶ್ ಚೆನ್ನಿತ್ತಲ ಯವರ ರನಕಹಳೆ ಯಾತ್ರೆ ಯಶಶ್ವೀಗೊಳಿಸಲು ಡಿಕೆಟಿ‌ಎಫ್ ಸಜ್ಜು

ಮಂಜೇಶ್ವರ : ನವಂಬರ್ 10 ರಿಂದ ಆರಂಭಗೊಳ್ಳುವ ವಿಪಕ್ಷ ನಾಯಕ ರಮೆಶ್ ಚೆನ್ನಿತ್ತಲರವರ ರಣಕಹಳೆ ಯಾತ್ರೆಯನ್ನು ಕಾಂಗ್ರೆಸ್ ನ ಪೋಷಕ ಸಂಘಟನೆಯಾದ ಡಿಕೆಟಿ‌ಎಫ್ ಹೇಳಿದೆ.
ಇದರ ಯಶಶ್ವೀಗಾಗಿ ಡಿ ಕೆ ಟಿ ಏಫ್ ಜಿಲ್ಲಾ ಸಮಿತಿ ವತಿಯಿಂದ ಆತೋಜಿಸಲಾದ ಸಮ್ಮಿಳನವನ್ನು ಡಿ ಸಿ ಸಿ ಅಧ್ಯಕ್ಷ ಹಕೀಂ ಕುನ್ನಿಲ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಪ್ರತಿಯೊಂದು ಕಡೆಗಳಲ್ಲೂ ಸಾಮಾನ್ಯ ಜನತೆ ಸಂಕಷ್ಟದಲ್ಲಿ ಸಿಲುಕಿದೆ. ಆದರೆ ಕೇರಳದಲ್ಲಿ ಯುಡಿ‌ಎಫ್ ಸರಕಾರ ಅಧಿಕಾರದಲ್ಲಿದ್ದಾಗ ಇಂತಹ ಪರಿಸ್ಥಿತಿ ಬಂದಿರಲಿಲ್ಲ. ಆದರೆ ಇದೀಗ ಪ್ರತಿಯೊಂದು ಸ್ಥಳಗಳಲ್ಲೂ ಸಾಮಾನ್ಯ ಜನತೆ ಕಷ್ಟವನ್ನು ಎದುರಿಸಬೇಕಾಗಿದೆ. ಈ ಬಗ್ಗೆ ಜನರು ಎಚ್ಚೆತ್ತುಗೊಳ್ಳುವಂತೆ ರಮೇಶ್ ಚೆನ್ನಿತಲ ರವರು ರಣಕಹಳೆ ನಡೆಸಲು ಮುಂದಾಗಿರುವುದಾಗಿ ಅವರು ಹೇಳಿದರು.
ಎ ವಾಸುದೇವನ್ ಅಧ್ಯಕ್ಷತೆ ವಹಿಸಿದರು.
ಪಿ ಗಂಗಾಧರನ್ ನಾಯರ್ ಸೇರಿದಂತೆ ಹಲವು ನೇತಾರರೌ ಈ ಸಂದರ್ಭ ಮಾತನಾಡಿದರು.

Related posts

Leave a Reply