Header Ads
Header Ads
Header Ads
Breaking News

ರವಿ ಕಟಪಾಡಿ ವೇಷ ಹಾಕಿ ಸಂಗ್ರಹಿಸಿದ್ದು 5,12,745 ರೂಪಾಯಿ ಅನಾರೋಗ್ಯ ಪೀಡಿತ ಏಳು ಮಕ್ಕಳ ಚಿಕಿತ್ಸೆಗೆ ವಿತರಣೆ..

ತಾನು ಕಡುಕಕಷ್ಟದಲ್ಲಿದ್ದರೂ ರವಿ ಕಟಪಾಡಿ ಅವರು ವೇಷ ಹಾಕಿ ಇತರರ ಸೇವೆಗೆ ಮುಂದಾಗಿರುವ ರವಿ ಕಟಪಾಡಿ ಅವರ ಸೇವೆ ನಿಜಕ್ಕೂ ಭಗವಂತನಿಗೆ ಪ್ರಿಯವಾದುದು ಎಂದು ಕೇಮಾರು ಸಾಧನಾಶ್ರಮದ ಈಶವಿಠಲದಾಸ ಸ್ವಾಮೀಜಿ ತಿಳಿಸಿದ್ದಾರೆ.

ವೇಷ ಹಾಕಿ ರವಿ ಕಟಪಾಡಿ ಫ್ರೆಂಡ್ಸ್ ಬಳಗವು ಸಂಗ್ರಹಿಸಿರುವ ರೂ.5,12,745 ಹಣವನ್ನು ಕಟಪಾಡಿ ಪೇಟೆಯ ವಿಜಯಾ ಬ್ಯಾಂಕ್ ಸಮೀಪ ನಡೆದ ಸಮಾರಂಭದಲ್ಲಿ ಮಂಗಳವಾರ 7 ಕುಟುಂಬಗಳಿಗೆ ವಿತರಿಸಿ ಅವರು ಮಾತನಾಡಿದರು. ಸರಕಾರ ನಿಜವಾದ ಜನಸೇವಕ ರವಿ ಕಟಪಾಡಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು. ಇದೀಗ ಪ್ರಶಸ್ತಿಗಳು ಮಾರಾಟದ ಹಂತಕ್ಕೆ ಬಂದು ತಲುಪಿದ್ದು, ಸಮಾಜಕ್ಕೆ ಮಾರಕವೆನಿಸಿದ ಮಧ್ಯ ಮಾರಾಟ ಮಾಡುವಾತನಿಗೂ ಪ್ರಶಸ್ತಿ ನೀಡುತ್ತಿರುವುದು ಅದರ ಮೌಲ್ಯವನ್ನು ತೋರಿಸುತ್ತದೆ. ಪ್ರಶಸ್ತಿಗಳನ್ನು ಇಂಥಹ ಸಮಾಜೋಮುಖಿ ಕೆಲಸ ಮಾಡುವವರಿಗೆ ನೀಡಿದ್ದಲ್ಲಿ ಪ್ರಶಸ್ತಿಯ ಗೌರವ ಹೆಚ್ಚಾಗಬಹುದು ಮಾತ್ರವಲ್ಲದೆ ಇವರಿಂದ ಇನ್ನಷ್ಟು ಸೇವೆ ನಿರೀಕ್ಷಿಸಲು ಸಾಧ್ಯ ಎಂದರು. ರವಿ ಕಟಪಾಡಿ ಫ್ರೆಂಡ್ಸ್ ಮತ್ತು ಅಭಿಮಾನಿಗಳ ಪರವಾಗಿ ಉಡುಪಿ ಜಿಲ್ಲೆಯ ಅಪರಾ ಜಿಲ್ಲಾಧಿಕಾರಿ ಅನುರಾಧಾ, ರವಿ ಕಟಪಾಡಿ ಮತ್ತು ಅವರ ತಾಯಿ ದೇಯಿಯವರನ್ನು ಸನ್ಮಾನಿಸಿದರು.

ಕಂಜೆನೈಟಲ್ ಇಥಿಯೋಸಿಸ್ ಎನ್ನುವ ಚರ್ಮರೋಗದಿಂದ ಬಳಲುತ್ತಿರುವ ಮೂಡುಬಿದ್ರೆ ಪಣಪಿಲ ಮುನಿಕೆಬೆಟ್ಟುವಿನ ಒಂದೂವರೆ ವರ್ಷದ ಲಾವಣ್ಯಳಿಗೆ ರೂ.2.50 ಲಕ್ಷ, ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಶಿವಮೊಗ್ಗದ ಮೆಹೆಕ್ ಜಿ. ಅವರಿಗೆ ರೂ.60ಸಾವಿರ, ದೆಂದೂರುಕಟ್ಟೆಯ ಸುನೀತಾ ಪ್ರಕಾಶ್ ದಂಪತಿಯ ಒಂದೂವರೆ ವರ್ಷದ ಮಗುವಿನ ಹೃದಯ ಚಿಕಿತ್ಸೆಗೆ ರೂ. 55ಸಾವಿರ, ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಪಾಂಗಾಳದ ೮ವರ್ಷದ ಮಗು ಕಿಶನ್ ಅವರಿಗೆ ರೂ.50 ಸಾವಿರ, ಹೃದಯ ಖಾಯಿಲೆಯಿಂದ ಬಳಲುತ್ತಿರುವ ಬನ್ನಂಜೆಯ ಅರುಷ್‌ಗೆ ರೂ.೩೫ಸಾವಿರ, ಕಾಲಿನ ಅಂಗವೈಕಲ್ಯತೆಯಿಂದ ಬಳಲುತ್ತಿರುವ ಅತೀಶ್ ಶೆಟ್ಟಿ ಕುಂದಾಪುರ ಅವರಿಗೆ ರೂ.30 ಸಾವಿರ, ಅಲೆವೂರಿನ ಅರುಷಿಗೆ ರೂ.15ಸಾವಿರ ನೆರವು ವಿತರಿಸಲಾಯಿತು. ಫಲಾನುಭವಿಗಳ ಹೆತ್ತವರು ಸೇರಿದಂತೆ ರವಿ ಕಟಪಾಡಿ ಅಭಿಮಾನಿಗಳು ರವಿ ಫ್ರೆಂಡ್ಸ್ ಬಳಗದ ಸಕಾಲಿಕ ಸೇವೆ ಬಗ್ಗೆ ಕೊಂಡಾಡಿದರು. ನೆರವು ಪಡೆದ ಕುಟುಂಬದ ಮನೆಯವರಂತೂ ವೇದಿಕೆಯಲ್ಲೇ ರವಿ ತಂಡಕ್ಕೆ ಹಾರೈಸಿದರು.

ವರದಿ-ಸುರೇಶ್ ಎರ್ಮಾಳ್

Related posts

Leave a Reply