

ಕರ್ನಾಟಕ ಸರಕಾರದ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಅವರನ್ನು ಮಂಗಳೂರಿನ ಪದ್ವ ಹೈಸ್ಕೂಲ್ ಮುಂಭಾಗದಲ್ಲಿ ಸಾಮಾಜಿಕ ಸೇವಾ ಕಾರ್ಯಕರ್ತ ಎ ಜಿ ಶರ್ಮ ಹಾಗೂ ಸಾನಿಧ್ಯದ ಆಡಳಿತಾಧಿಕಾರಿ ಡಾಕ್ಟರ್ ವಸಂತ್ ಕುಮಾರ್ ಶೆಟ್ಟಿ ಇವರು ಶಾಲು ಹೊದಿಸಿ ಹಾರ ಅರ್ಪಿಸಿ ಅಭಿನಂದಿಸಿ ಶುಭ ಹಾರೈಸಿದರು.
ಶ್ರೀಯುತರು ಪತ್ನಿ ಸಮೇತರಾಗಿ ಕಮಲ ಶಿಲೆಯಿಂದ ಮಂಗಳೂರಿನ ಉಳ್ಳಾಲದ ಕಡೆ ಸಾಗುತ್ತಿದ್ದರು ಶಾಲೆ ಪ್ರಾರಂಭವಾದ ಬಳಿಕ ಸಾನಿಧ್ಯಕ್ಕೆ ಭೇಟಿ ನೀಡಬೇಕೆಂದು ವಸಂತ್ ಕುಮಾರ್ ಶೆಟ್ಟಿ ಅವರು ವಿನಂತಿಸಿಕೊಂಡರು..