Breaking News

ರಶಿಯಾದ ಕಂಟಿ ವಿಶ್ವ ತಂಡ ಚೆಸ್, ಕೊನೆಗೂ ಗೆದ್ದ ಭಾರತ ಪುರುಷ ತಂಡ

ಗ್ರ್ಯಾಂಡ್ಮಾಸ್ಟರ್ ಬಿ. ಅಧಿಬನ್ ಅವರ ಉತ್ತಮ ಆಟದಿಂದಾಗಿ ಭಾರತ ಪುರುಷರ ತಂಡ ರಶಿಯಾದ ಕಂಟಿ ಇಲ್ಲಿ ನಡೆಯುತ್ತಿರುವ ವಿಶ್ವ ತಂಡ ಚೆಸ್ ಚಾಂಪಿಯನ್ಷಿಪ್ನಲ್ಲಿ ಮಂಗಳವಾರ ಗೆಲುವು ದಾಖಲಿಸಿದೆ.
ಮೂರನೇ ಸುತ್ತಿನಲ್ಲಿ ಭಾರತ ೨.೫-೧.೫ರಲ್ಲಿ ಬೆಲಾರಸ್ ತಂಡವನ್ನು ಮಣಿಸಿತು. ಮೊದಲ ಎರಡು ಸುತ್ತುಗಳ ಪಂದ್ಯದಲ್ಲಿ ಪೋಲೆಂಡ್ ಹಾಗೂ ಚೀನಾ ತಂಡಗಳೊಂದಿಗೆ ಸೋಲು ಕಂಡಿದ್ದ ಭಾರತ ತಂಡ ಗೆಲುವಿನ ಹಾದಿಗೆ ಮರಳಿದೆ. ವಿದಿತ್ ಗುಜರಾತಿ ಮೊದಲ ಪಂದ್ಯದಲ್ಲಿ ಬೆಲಾರಸ್ನ ಸೆರ್ಜಿ ಜಿಗಾಲ್ಕೊ ಅವರೊಂದಿಗೆ ಪಾಯಿಂಟ್ಸ್ ಹಂಚಿಕೊಂಡರು. ವ್ಲಾದಿಸ್ಲಾವ್ ವಿರುದ್ಧ ಭಾರತದ ಅಧಿಬನ್ ಅಮೋಘ ಗೆಲುವು ದಾಖಲಿಸಿದರು. ಪರಿಮಾರ್ಜುನ್ ನೇಗಿ ಡ್ರಾ ಮಾಡಿಕೊಂಡರು.
ಮಹಿಳೆಯರ ವಿಭಾಗದ ಪಂದ್ಯದಲ್ಲಿ ಭಾರತ ೧.೫-೨.೫ರಲ್ಲಿ ಉಕ್ರೇನ್ ಎದುರು ಸೋತಿದೆ. ಹರಿಕಾ ಡ್ರಾ ಮಾಡಿಕೊಂಡರು. ತಾನಿಯಾ ಸಚದೇವ್ ಎರಡನೇ ಪಂದ್ಯದಲ್ಲಿ ಸೋಲು ಅನುಭವಿಸಿದರು. ಇಶಾ ಕರ್ವಾಡೆ ಪಾಯಿಂಟ್ಸ್ ಹಂಚಿಕೊಂಡರು. ನತಾಲಿಯಾ ಬುಸ್ಕಾ ಅವರೊಂದಿಗೆ ಪದ್ಮಿನಿ ರಾವತ್ ಡ್ರಾ ಮಾಡಿಕೊಂಡರು.

Related posts

Leave a Reply