Header Ads
Header Ads
Breaking News

ರಸಗೊಬ್ಬರದಲ್ಲಿ ಮರಳು ಪತ್ತೆ : ಸೂಕ್ತ ತನಿಖೆಗೆ ಪುತ್ತೂರಿನ ಕೃಷಿಕರ ಆಗ್ರಹ

ಪುತ್ತೂರಿನಲ್ಲಿ ಕೃಷಿಕರಿಗೆ ಕಂಪನಿಯೊಂದು ಕಳಪೆ ಗುಣಮಟ್ಟದ ರಸಗೊಬ್ಬರ ಪೂರೈಕೆ ಮಾಡುತ್ತಿದೆ ಎನ್ನುವ ಆರೋಪ ಕೇಳಿ ಬರಲಾರಂಭಿಸಿದೆ. ಪುತ್ತೂರಿನ ಕೃಷಿಕರೊಬ್ಬರು ಹೂವಿನ ತೋಟಕ್ಕೆ ಹಾಕಲೆಂದು ಖರೀದಿಸಿರುವ ರಸಗೊಬ್ಬರದಲ್ಲಿ ಗೊಬ್ಬರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮರಳೇ ಪತ್ತೆಯಾಗಿದೆ.

ರಸಗೊಬ್ಬರದಲ್ಲಿ ಇಂತಿಷ್ಟು ಪ್ರಮಾಣದಲ್ಲಿ ಮರಳು ಹಾಗೂ ಮಣ್ಣು ಸೇರಿಸುವುದು ಸಾಮಾನ್ಯವಾಗಿದ್ದರೂ, ಪ್ರಸ್ತುತ ಕೃಷಿಕರು ಆರೋಪಿಸುವ ರಸಗೊಬ್ಬರದ ಚೀಲದಲ್ಲಿ ಮರಳೇ ಹೆಚ್ಚಾಗಿದೆ ಎನ್ನಲಾಗಿದೆ. ರಸಗೊಬ್ಬರದ ಚೀಲದಿಂದ ತೆಗೆದ ಪ್ರತೀ ಐದು ಕಪ್ ಗೊಬ್ಬರದಲ್ಲಿ ಎರಡು ಕಪ್ ಮರಳೇ ಸೇರಿದೆ ಎನ್ನುವುದು ಕೃಷಿಕರ ಆರೋಪವಾಗಿದ್ದು, ಕೃಷಿ ಇಲಾಖೆ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆನ್ನುವ ಒತ್ತಾಯವೂ ಕೇಳಿ ಬರುತ್ತಿದೆ.

Related posts

Leave a Reply

Your email address will not be published. Required fields are marked *