Header Ads
Header Ads
Breaking News

ರಸ್ತೆಗೆ ಉರುಳಿದ ಬೃಹತ್ ಮರ, ವಿಟ್ಲ ಸಾಲೆತ್ತೂರು ಮುಖ್ಯ ಹೆದ್ದಾರಿ ಸಂಪರ್ಕ ಸ್ಥಗಿತ

ಬೃಹತ್ ಗಾತ್ರದ ಮರಯೊಂದು ರಸ್ತೆಗೆ ಉರುಳಿದ ಪರಿಣಾಮ ಹಲವು ತಾಸುಗಳ ವರೆಗೂ ಮುಖ್ಯ ಹೆದ್ದಾರಿ ಸಂಪರ್ಕ ಸ್ಥಗಿತಗೊಂಡು ಸಾರ್ವಜಿಕರು ಪರದಾಡಿದ ಘಟನೆ ಕೊಳ್ನಾಡು ಗ್ರಾಮದ ವಿಟ್ಲ ಸಾಲೆತ್ತೂರು ರಸ್ತೆಯ ಕರೈ ಎಂಬಲ್ಲಿ ಸಂಭವಿಸಿದೆ.
ಮಾರ್ನಬೈಲ್‌ನಿಂದ ಕಬಕ ಸಂಪರ್ಕಿಸುವ ರಾಜ್ಯ ಹೆದ್ದಾರಿ ೧೮ರ ಕರೈ ಎಂಬಲ್ಲಿಯ ರಸ್ತೆ ಬದಿಯಲ್ಲಿರುವ ಬೃಹತ್ ಗಾತ್ರದ ದೇವಾದಾರು ಮರ ತಡರಾತ್ರಿ ೩ ಗಂಟೆಗೆ ಸುಮಾರಿಗೆ ರಸ್ತೆಗೆ ಉರುಳಿದೆ. ಇದರಿಂದ ರಸ್ತೆ ಬದಿಯಲ್ಲಿ ಹಾದುಹೋಗುವ ವಿದ್ಯುತ್ ತಂತಿಗೆ ಹಾನಿಯಾಗಿದೆ. ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ವಿಟ್ಲ, ಸಾಲೆತ್ತೂರು, ಮಂಚಿ, ಕುಕ್ಕಾಜೆ, ಮಂಗಳೂರು ಕಡೆಗೆ ತೆರಳುವ ವಾಹನಗಳು ರಸ್ತೆಯಲ್ಲಿ ಬಳಿಕ ಬದಲಿ ರಸ್ತೆ ಮೂಲಕ ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿತ್ತು. ಬಳಿಕ ಬದಲಿ ರಸ್ತೆ ಮೂಲಕ ವಾಹನಗಳು ಸಂಚಾರ ಪ್ರಾರಂಭಿಸಿದೆ.
ಈ ಬಗ್ಗೆ ಮಾಹಿತಿ ಪಡೆದ ಸಾರ್ವಜನಿಕರು, ಮೆಸ್ಕಾಂ ಅಧಿಕಾರಿಗಳು ಹಾಗೂ ಸ್ಥಳೀಯ ಹೆಲ್ಪಿಂಗ್ ಹ್ಯಾಂಡ್ ಟ್ರಸ್ಟ್ ಕರೈ ಸದಸ್ಯರು ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದು, ಬೆಳಿಗ್ಗೆ ಎಂಟು ಗಂಟೆ ವೇಳೆಗೆ ರಸ್ತೆಯಲ್ಲಿದ್ದ ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

Related posts

Leave a Reply