Header Ads
Breaking News

ರಸ್ತೆಯ ಎರಡು ಭಾಗದಲ್ಲಿ ಆಳೆತ್ತರಕ್ಕೆ ಬೆಳೆದ ಹುಲ್ಲು ಪೊದರು-ಕಾರ್ಕಳದ ಕಲ್ಲೊಟ್ಟೆ ಮುಖ್ಯರಸ್ತೆಯ ದುಸ್ಥಿತಿ

ಕಾರ್ಕಳ ಪುರಸಭೆ ವ್ಯಾಪ್ತಿಯ ಮೂರನೇ ವಾರ್ಡಿನ ಕಲ್ಲೊಟ್ಟೆ ಎಂಬ ಮುಖ್ಯರಸ್ತೆಯಲ್ಲಿ ಸುಮಾರು ಮೂರು ತಿಂಗಳಿಂದ ಹುಲ್ಲು ತುಂಬಿಕೊಂಡು ಈ ರಸ್ತೆಯಲ್ಲಿ ನಡೆದುಕೊಂಡು ಹೋಗುವುದು ದೊಡ್ಡ ಸಮಸ್ಯೆಯಾಗಿದೆ. ಇಲ್ಲಿಯ ಚುನಾಯಿತ ಪ್ರತಿನಿಧಿ ಹಾಗೂ ಪುರಸಭೆಯ ಗಮನಕ್ಕೂ ತಂದರು ಯಾವುದೇ ಪ್ರಯೋಜನ ಇಲ್ಲದಂತೆ ವರ್ತಿಸುತ್ತಾರೆ. ಈ ಕಳೆಯ ಒಳಗೆ ಈಗಾಗಲೇ ವಿಷಜಂತುಗಳು ಸೇರಿಕೊಂಡು ಮಾರ್ಗದಲ್ಲಿ ಸಂಚರಿಸುತ್ತವೆ. ರಾತ್ರಿ ವೇಳೆಗೆ ಈ ಮಾರ್ಗದಲ್ಲಿ ಸಂಚರಿಸುವುದೇ ಸಮಸ್ಯೆಯಾಗಿದೆ. ವಾಹನಗಳು ಬರುವಾಗ ಪಾದಚಾರಿಗಳು ಈ ಕಳೆ ಮೇಲೆಯೇ ನಡೆದು ಸಾಗಬೇಕಾಗುತ್ತದೆ. ಅದಲ್ಲದೆ ಈ ಮಾರ್ಗದಲ್ಲಿ ಹುಲ್ಲು ಪೊದರುಗಳಿಂದ ಒಂದೆರಡು ಅಪಘಾತಗಳು ನಡೆದಿವೆ. ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಈ ಸಮಸ್ಯೆಯನ್ನು ಬಗೆ ಹರಿಸಬೇಕಾಗಿ ಎಂದು ಇಲ್ಲಿ ಸ್ಥಳೀಯರು ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ವರದಿ: ಖಲೀಲ್ ಕಾರ್ಕಳ

Related posts

Leave a Reply

Your email address will not be published. Required fields are marked *