Header Ads
Breaking News

ರಸ್ತೆಯ ಹೊಂಡಕ್ಕೆ ಸಿಕ್ಕಿಹಾಕಿಕೊಂಡ ಖಾಸಗಿ ಬಸ್ : 2 ತಾಸುಗಳವರೆಗೆ ಸಂಚಾರ ಅಸ್ತವ್ಯಸ್ತ

ವಿಟ್ಲ: ಬೆಂಗಳೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ರಸ್ತೆಯ ಹೊಂಡಕ್ಕೆ ಸಿಕ್ಕಿಹಾಕಿಕೊಂಡು ರಸ್ತೆಯಲ್ಲಿಯೇ ಬಾಕಿಯಾದ ಘಟನೆ ಮಾಣಿ ಸಮೀಪದ ಬೊಳ್ಳುಕಳ್ಳು ಎಂಬಲ್ಲಿ ಸಂಭವಿಸಿದೆ. ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಹೊಂಡಗಳು ನಿರ್ಮಾಣಗೊಂಡಿದ್ದು, ಬೆಳಿಗ್ಗೆ ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಬಸ್ ಹೊಂಡದಲ್ಲಿ ಸಿಲುಕಿದೆ. ಇದರಿಂದ ಘನ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿ 2 ತಾಸುಗಳ ವರೆಗೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಂಗಳೂರು ಸುತ್ತಮುತ್ತಲಿಗೆ ತೆರಳಬೇಕಾದ ಪ್ರಯಾಣಿಕರು ರಸ್ತೆಯಲ್ಲಿ ನಿಲ್ಲುವಂತಾಗಿದೆ. ಬಳಿಕ ಉಪ್ಪಿನಂಗಡಿಯಿಂದ ಕ್ರೇನ್ ತರಿಸಿ ಬಸ್ಸನ್ನು ಬದಿಗೆ ಸರಿಸಲಾಯಿತು.

Related posts

Leave a Reply

Your email address will not be published. Required fields are marked *