Header Ads
Header Ads
Breaking News

ರಸ್ತೆಹೊಂಡಕ್ಕೆ ಕ್ರಶರ್ ಹುಡಿಯ ತೇಪೆ: ಧೂಳುಮಯವಾದ ಕಾರ್ಕಳ ನಗರ

ಕಾರ್ಕಳ: ಮಳೆಯ ಅಬ್ಬರ ಹಾಗೂ ಕಳಪೆ ಕಾಮಗಾರಿಯಿಂದ ಕಾರ್ಕಳ ಪೇಟೆಯ ರಸ್ತೆಗಳೆಲ್ಲಾ ಹದಗೆಟ್ಟ ಪರಿಣಾಮ ಕಾರ್ಕಳ ಪುರಸಭೆ ಹೊಂಡಮುಚ್ಚಿಸುವ ಸಲುವಾಗಿ ಹಾಕಿದ್ದ ಕ್ರಶರ್ ಹುಡಿಯು ಇಂದು ನಾಗರಿಕರನ್ನು ಅಕ್ಷರಶಃ ಕಂಗೆಡಿಸಿದೆ.ತಾತ್ಕಾಲಿಕವಾಗಿ ಹೊಂಡಮುಚ್ಚಿಸುವ ಸಲುವಾಗಿ ಹಾಕಿರುವ ಧೂಳಿನಿಂದ ಇಂದು ಜನರು ಗೊಳು ಅನುಭವಿಸುವಂತಾಗಿದೆ.ಈ ಬಾರಿಯ ಮಳೆಗಾಲದಲ್ಲಿ ಹಿಂದೆಂದೂ ಕಂಡಿಯರದಷ್ಟು ರೀತಿಯಲ್ಲಿ ನಗರದ ರಸ್ತೆಗಳು ಕೆಟ್ಟು ರಸ್ತೆಯೋ ಕೆರೆಯೋ ಎನ್ನುವಂತೆ ಬೃಹತ್ ಗಾತ್ರದ ಹೊಂಡಗಳಾಗಿತ್ತು. ಹೊಂಡದಲ್ಲಿ ನೀರುತುಂಬಿದ್ದರಿಂದ ಎಷ್ಟೋ ದ್ವಿಚಕ್ರವಾಹನ ಸವಾರರು ಅರಿವಿಲ್ಲದೇ ಹೊಂಡಕ್ಕೆ ಬಿದ್ದು ಅಪಘಾತಗಳಾದ ಘಟನೆಯೂ ನಡೆದಿದೆ. ಇದಕ್ಕೆ ತಾತ್ಕಾಲಿಕ ಪರಿಹಾರವೆಂಬಂತೆ ಪುರಸಭೆ ಜಲ್ಲಿಹುಡಿ ಹಾಕಿ ಹೊಂಡ ಮುಚ್ಚುವ ಕಾರ್ಯಕ್ಕೆ ಮುಂದಾಗಿತ್ತು.

ಇದೀಗ ಮಳೆಗಾಲ ಕಳೆದು ರಣಬಿಸಿಲು ಆರಂಭವಾಗಿದ್ದು ಜಲ್ಲಿಹುಡಿ ಒಣಗಿ ವಾಹನಗಳ ಓಡಾಟದಿಂದ ಪರಿಸರವೇ ಧೂಳಿನಿಂದ ಮುಳುಗಿಹೋಗುವಂತಾಗಿದೆ.ಪ್ರಮುವಾಗಿ ಬಂಗ್ಲೆಗುಡ್ಡೆ, ಆರಾಮ್ ಓಣಿಯಿಂದ ಮೂರುಮಾರ್ಗ, ಬಂಡೀಮಠದಿಂದ ಸಾಲ್ಮರವರೆಗಿನ ರಸ್ತೆಗಳಿಗೆ ಜಲ್ಲಿಹುಡಿ ಹಾಕಲಾಗಿದ್ದು ವಾಹನಗಳ ಓಡಾಟದಿಂದ ಇಡೀ ರಸ್ತೆ ತುಂಬಾ ಧೂಳು ಆವರಿಸುತ್ತಿದೆ. ಧೂಳು ಉಸಿರಾಟದ ಮೂಲಕ ಶ್ವಾಸಕೋಶ ಸೇರುತ್ತಿದ್ದು ಚರ್ಮದ ಖಾಯಿಲೆ, ಅಲರ್ಜಿ, ಮುಂತಾದ ಖಾಯಿಲೆಗಳು ಕಾಡುತ್ತಿದೆ. ಅಲ್ಲದೇ ಅಸ್ತಮಾರೋಗವಿರುವವರು ಈ ರಸ್ತೆಯಲ್ಲಿ ಓಡಾಡುವುದೇ ಅಸಾಧ್ಯವೆನ್ನುವಂತಾಗಿದ್ದು, ಧೂಳಿನ ಕಣಗಳು ಕಣ್ಣಿಗೆ ಸೇರಿಕೊಡು ಕಣ್ಣಿನ ದೃಷ್ಟಿಗೂ ಮಾರಕವಾಗಿ ಪರಿಣಮಿಸುತ್ತಿದೆ.ಈ ಕುರಿತು ಪುರಸಭೆ ತಕ್ಷಣವೇ ಸ್ಪಂದಿಸಬೇಕಿದ್ದು, ಜಲ್ಲಿಹುಡಿ ಮೇಲೆ ನೀರನ್ನು ಹಾಯಿಸಿದರೆ ಧೂಳಿನಿಂದ ಒಂದಷ್ಟು ಮುಕ್ತಿ ಸಿಗಬಹುದಾಗಿದೆ.


 

Related posts

Leave a Reply