Header Ads
Breaking News

ಕಲ್ಲಾವು ಸೇತುವೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್‍ರಿಂದ ಗುದ್ದಲಿಪೂಜೆ

ಮಂಗಳೂರು : ದೇರೆಬೈಲ್ ನೈರುತ್ಯ ವಾರ್ಡಿನ ಕಲ್ಲಾವು ಸೇತುವೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಗುದ್ದಲಿಪೂಜೆ ನೆರವೇರಿಸಿದರು.ಕಲ್ಲಾವು ಸಂಕ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಗೆ 6ಲಕ್ಷ ಅನುದಾನ ಬಿಡುಗಡೆಯಾಗಿದೆ. ಕೇಂದ್ರ ಸರಕಾರದಿಂದ ನೀಡಲಾಗುವ 14ನೇ ಹಣಕಾಸು ವ್ಯವಸ್ಥೆ ಅನುದಾನದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಯು ಇಲ್ಲಿನ ಪರಿಸರದ ಜನರ ಬಹು ದಿನದ ಬೇಡಿಕೆಯಾಗಿತ್ತು. ಶೀಘ್ರವೇ ಕಾಮಗಾರಿ ಪ್ರಾರಂಭಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ. ಜನರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.

ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸೇತುವೆಯ ಮೂಲಕ ತೆರಳುವವರಿಗೆ ಸಮಸ್ಯೆ ಆಗಬಹುದು. ವಾಹನಗಳನ್ನು ಹೊರತುಪಡಿಸಿ ನಡೆದು ಹೋಗಲು ಪಕ್ಕದಲ್ಲಿ ಪರ್ಯಾಯ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದೇನೆ. ಅಭಿವೃದ್ಧಿಯ ದೃಷ್ಟಿಯಿಂದ ಸಾರ್ವಜನಿಕರು ನಮ್ಮೊಂದಿಗೆ ಸಹಕರಿಸಬೇಕು ಎಂದು ಕಾಮತ್ ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಸ್ಥಳೀಯ ಪಾಲಿಕೆ ಸದಸ್ಯರಾದ ಗಣೇಶ್ ಕುಲಾಲ್, ಬಿಜೆಪಿ ಮುಖಂಡರಾದ ರಾಧಾಕೃಷ್ಣ, ಅರುಣ್ ಕುಮಾರ್, ಗೌತಮ್ ಸಾಲ್ಯಾನ್, ರಾಕೇಶ್ ಸಾಲ್ಯಾನ್, ಕಿರಣ್ ಶೆಟ್ಟಿ ಉರ್ವ, ಲತೀಶ್ ಬಂಗೇರ, ಚೆನ್ನಕೇಶವ, ರಾಜೇಶ್ ಬಂಜನ್, ಶೈಲೇಶ್ ಕುಮಾರ್, ಫ್ರಾನ್ಸಿಸ್,ಪುನೀತ್ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *