Header Ads
Breaking News

ರಸ್ತೆ ಉಳಿಸಿಕೊಳ್ಳಲು ಕಾನೂನು ರೀತಿಯ ಹೋರಾಟ-ಸುಳ್ಯದ ವಿನೂ ನಗರದ ನಿವಾಸಿಗಳಿಂದ ಎಚ್ಚರಿಕೆ

ನಾವು ಜಾಗ ಖರೀದಿಸುವಾಗ ಆ ರಸ್ತೆಯನ್ನೇ ನಕ್ಷೆಯಲ್ಲಿ ತೋರಿಸಲಾಗಿತ್ತು. ಈಗ ಈ ರಸ್ತೆಯ ಕುರಿತು ವಿವಾದ ಎದ್ದಿರುವುದರಿಂದ ನಮ್ಮ ಮನೆಗಳಿಗೆ ಹೋಗುವ ರಸ್ತೆಯನ್ನು ಉಳಿಸಿಕೊಳ್ಳಲು ನಾವು ಕಾನೂನು ಹೋರಾಟ ನಡೆಸುತ್ತೇವೆ. ಅದಕ್ಕೆ ಬೇಕಾದ ಎಲ್ಲ ರೀತಿಯ ದಾಖಲೆಗಳಿದ್ದು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ವಿನೂ ನಗರ ಬಡಾವಣೆಯ ನಿವಾಸಿಗಳು ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಾ. ಮಹಾಬಲೇಶ್ವರ ರವರು ಈ ಬಡಾವಣೆಯಲ್ಲಿರುವ 9 ಮನೆಗಳ ಪೈಕಿ 7 ಮನೆಗಳಿಗೆ ಇದೇ ರಸ್ತೆಯ ಆಧಾರದಲ್ಲಿ ಮನೆ ಕಟ್ಟಲು ನ.ಪಂ. ಪರವಾನಿಗೆ ನೀಡಿದೆ. ಜತೆಗೆ ನಕ್ಷೆಗಳಲ್ಲಿ ಈ ರಸ್ತೆಗಳಿದ್ದು ಜತೆಗೆ ಬೆಟ್ಟಂಪಾಡಿಯಿAದ ಬರುವ ರಸ್ತೆಯೂ ಇದೆ. ಇದಿಷ್ಟೇ ಅಲ್ಲದೆ ಕನ್ವರ್ಷ ಆರ್ಡರ್, ಸೂಡಾ ಅನುಮೋದಿತ ವಿನ್ಯಾಸ ನಕ್ಷೆ, ಬಿತ್ತಿ ಪತ್ರಗಳು, ನೀರು ಮತ್ತು ಒಳಚರಂಡಿ ನಕ್ಷೆ ಹೀಗೆ ಎಲ್ಲದಕ್ಕೂ ಇದೆ ರಸ್ತೆಯನ್ನು ತೋರಿಸಲಾಗಿದೆ. ಇದಕ್ಕೆಲ್ಲದಕ್ಕೂ ನ.ಪಂ. ಅಧಿಕಾರಿಗಳು ಧೃಡೀಕರಿಸಿ ಕೊಟ್ಟ ದಾಖಲೆ ಪತ್ರಗಳು ನಮ್ಮಲ್ಲಿವೆ ಎಂದು ಅವರು ವಿವರ ನೀಡಿದರು. ಸುದ್ದಿಗೋಷ್ಟಿಯಲ್ಲಿ ಬಡಾವಣೆ ನಿವಾಸಿಗಳಾದ ಡಾ. ಮೈನಾ, ಬಿ.ಚಂದ್ರಶೇಖರ್, ಬಾಲಕೃಷ್ಣ, ದಿನೇಶ್ ಪೂಜಾರಿ, ಕೇಶವೇಣಿ, ಮಹಮ್ಮದ್ ತನ್ವಿರ್, ಜಾಕೀರ್ ಹುಸೇನ್ ಹಾಜರಿದ್ದರು.
ವರದಿ: ಪದ್ಮನಾಭ ಸುಳ್ಯ

Related posts

Leave a Reply

Your email address will not be published. Required fields are marked *