Header Ads
Header Ads
Breaking News

ರಸ್ತೆ ತಡೆದು ಪ್ರತಿಭಟನೆ ಬಿಜೆಪಿಯಿಂದ ಪ್ರತಿಭಟನೆ

ಸುರತ್ಕಲ್-ಎಂಆರ್‌ಪಿಎಲ್ ರಸ್ತೆ ಅಭಿವೃದ್ಧಿ ಯೋಜನೆ ಇನ್ನೂ ಅತಂತ್ರ ಸ್ಥಿತಿಯಲ್ಲಿದ್ದು, ರಸ್ತೆ ಹೊಂಡ ಸಮಸ್ಯೆಯಿಂದ ರಸ್ತೆ ಬಳಕೆದಾರರು ಹೈರಾಣಾಗಿದ್ದಾರೆ. ರಸ್ತೆ ನಾದುರಸ್ಥಿಯ ವಿರುದ್ಧ ಈ ವರೆಗೆ ಅನೇಕ ಪ್ರತಿಭಟನೆ ಜಾಥಾ ನಡೆಸಲಾಗಿದ್ದು, ಯೋಜನೆ ವಿಳಂಬಗತಿ ಪ್ರತಿಭಟಿಸಿ ಬಿಜೆಪಿ ಶಕ್ತಿ ಕೇಂದ್ರದ ನೇತೃತ್ವದಲ್ಲಿ ಸುರತ್ಕಲ್ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಸಿದರು.

ಸುರತ್ಕಲ್ ಜಂಕ್ಷನ್‌ನಿಂದ ಕಾನ ಜಂಕ್ಷನ್‌ವರೆಗೆ ಜಾಥಾ ನಡೆಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಡಾ. ಭರತ್ ಶೆಟ್ಟಿ ಅವರು, ಈ ರಸ್ತೆ ವಾರದಲ್ಲಿ ದುರಸ್ಥಿ ಮಾಡದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು. ಈ ರಸ್ತೆ ಅಭಿವೃದ್ಧಿಗೆ ೫೮ ಕೋಟಿ ರೂ ವೆಚ್ಚದಲ್ಲಿ ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ಅಭಿವೃದ್ಧಿ ಪಡಿಸುವ ಪ್ರಸ್ತಾಪದಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭ ಬಿಜೆಪಿ ಶಕ್ತಿಕೇಂದ್ರದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡೊದ್ದರು.

Related posts

Leave a Reply