

ಉದ್ಯಾವರದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕ ನಿಂತಿದ್ದ ವ್ಯಕ್ತಿಯೋರ್ವರಿಗೆ ಖಾಸಗಿ ತಡೆ ರಹಿತ ಬಸ್ಸೊಂದು ಡಿಕ್ಕಿಯಾದ ಪರಿಣಾಮ ಆ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.
ಮೃತ ವ್ಯಕ್ತಿ ಉದ್ಯಾವರ ಅಂಕುದ್ರ ನಿವಾಸಿ ರಾಜು ಪೂಜಾರಿಯವರ ಪುತ್ರ ಸುನೀಲ್ ಪೂಜಾರಿ (32). ಅವಿವಾಹಿತರಾಗಿದ್ದ ಇವರು ಕುಷನ್ ವೃತ್ತಿ ನಡೆಸುತ್ತಿದ್ದು ರಸ್ತೆ ದಾಟಲು ನಿಂತಿದ್ದ ಇವರಿಗೆ ಮಂಗಳೂರು ಕಡೆಯಿಂದ ಅತೀ ವೇಗವಾಗಿ ಮುನ್ನುಗ್ಗಿ ಬಂದ ಖಾಸಗಿ ಬಸ್ ಡಿಕ್ಕಿಯಾಗಿದ್ದು, ಬಸ್ಸಿನ ಚಕ್ರಕ್ಕೆ ಸಿಲುಕಿದ ಸುನೀಲ್ ದೇಹ ಛಿದ್ರ ಗೊಂಡಿದೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.