Header Ads
Header Ads
Breaking News

ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಸ್ಕೂಟರ್ ಢಿಕ್ಕಿ

ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಸ್ಕೂಟರ್ ಢಿಕ್ಕಿಯಾಗಿ ಸ್ಕೂಟರ್‌ನಲ್ಲಿದ್ದ ಇಬ್ಬರು ಸವಾರರೂ ಗಂಭೀರ ಗಾಯಗೊಳಿಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ಎರ್ಮಾಳ್ ಪೆಟ್ರೋಲ್ ಬಂಕ್ ಸಮೀಪ ನಡೆದಿದೆ.

ಲಾರಿ ಚಾಲಕರು ರಸ್ತೆಯಂಚಿನಲ್ಲಿ ಲಾರಿಯನ್ನು ನಿಲ್ಲಿಸಿ ಪಕ್ಕದ ಹೋಟೇಲ್‌ಗೆ ಚಾ ಕುಡಿಯಲೆಂದು ಹೋಗಿದ್ದರು. ಇದೇ ಸಂದರ್ಭ ಸ್ಕೂಟರ್ ಲಾರಿಗೆ ಢಿಕ್ಕಿ ಹೊಡೆದಿದೆ. ಪಡುಬಿದ್ರಿ ಕಂಚಿನಡ್ಕ ನಿವಾಸಿಗಳಾದ ಹುಸೇನಾಜಿ ಹಾಗೂ ಅಬೂಬಕ್ಕರ್ ಗಾಯಗೊಂಡವರು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನೆಗೆ ಸಂಬಂಧಿಸಿದಂತೆ ಹೊಟೇಲ್ ಮಾಲಿಕರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ವರದಿ: ಸುರೇಶ್ ಎರ್ಮಾಳ್ ಪಡುಬಿದ್ರಿ

Related posts

Leave a Reply